ಎನ್.ಡಿ.ಎ. ಸಮಾವೇಶ: ಮಾ. 16ರಂದು: ಪದ್ಮಜಾ ವೇಣುಗೋಪಾಲನ್ ಉದ್ಘಾಟನೆ
ಕಾಸರಗೋಡು: ಕಾಸರಗೋಡು ಲೋಕಸಭಾ ಮಟ್ಟದ ಎನ್ಡಿಎ ಸಮಾವೇಶ ಮಾರ್ಚ್ 16ರಂದು ಅಪರಾಹ್ನ 3 ಗಂಟೆಗೆ ಕಾಸರಗೋಡು ಮುನಿಸಿಪಲ್ ಟೌನ್ಹಾಲ್ನಲ್ಲಿ ನಡೆಯಲಿದೆ.
ಕೆಲವು ದಿನಗಳ ಹಿಂದೆಯಷ್ಟೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ರ ಮಗಳು ಪದ್ಮಜಾ ವೇಣುಗೋಪಾಲನ್ ಸಮಾವೇಶವನ್ನು ಉದ್ಘಾಟಿಸುವರು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸಿ.ಕೆ. ಪದ್ಮನಾಭನ್ ಪ್ರಧಾನ ಭಾಷಣಕಾರರಾಗಿ ಭಾಗ ವಹಿಸಿ ಮಾತನಾಡುವರು. ಎನ್ಡಿಎಯ ವಿವಿಧ ಘಟಕ ಪಕ್ಷಗಳ ಹಲವು ರಾಜ್ಯ ಮತ್ತು ಜಿಲ್ಲಾ ನೇತಾರರು ಇದರಲ್ಲಿ ಭಾಗವಹಿಸುವರು.