ಎನ್.ಸಿ.ಪಿ(ಎಸ್)ಯಿಂದ ಇಫ್ತಾರ್ ಸಂಗಮ
ಉಪ್ಪಳ: ಎನ್ಸಿಪಿ (ಎಸ್) ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಂಜೇಶ್ವರ ಮಂಡಲದ ಕೈಕಂಬದಲ್ಲಿ ಇಫ್ತಾರ್ ಸಂಗಮ ನಡೆಸಲಾಯಿತು. ವಿವಿಧ ಧಾರ್ಮಿಕ ಮುಖಂಡರು, ರಾಜಕೀಯ ಪಕ್ಷಗಳ ಜಿಲ್ಲಾ, ರಾಜ್ಯ ಮುಖಂಡರು, ಸಾಮಾ ಜಿಕ, ಸಾಂಸ್ಕೃತಿಕ ರಂಗದ ಕಾರ್ಯ ಕರ್ತರು ಭಾಗವಹಿಸಿದರು. ಸಚಿವ ಎ.ಕೆ. ಶಶೀಂದ್ರನ್ ಉದ್ಘಾಟಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಕರೀಂ ಚಂದೇರ ಅಧ್ಯಕ್ಷತೆ ವಹಿಸಿದರು. ಎಡಪಕ್ಷದ ರಾಜ್ಯ ಸಂಚಾ ಲಕ ಇ.ಪಿ. ಜಯರಾಜನ್, ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್ ಸಹಿತ ಹಲವರು ಭಾಗವಹಿಸಿದರು.