ಎರಡು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಗೆ ಚಾಲನೆ
ಪುತ್ತಿಗೆ: ಪಂಚಾಯತ್‌ನ ಬಾಡೂರು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಜ್ಯಾರಿಗೊಳಿಸುವ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯ ನಿರ್ಮಾಣ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಪರಿಶಿಷ್ಟ ಜಾತಿ ಅಭಿವೃದ್ಧಿ ಮೂಲಕ ವಿವಿಧ ವಿಧಾನಸಭಾ ಮಂಡಲಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಹಿಂದುಳಿದಿರುವ, ೩೦ ಅಥವಾ ಅದಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುವ ಕಾಲನಿಗಳ ಸಮಗ್ರ ಅಭಿವೃದ್ಧಿ ಉದ್ದೇಶಿಸಿ ಜ್ಯಾರಿಗೊಳಿಸುವ ಯೋಜನೆ ಯಾಗಿದೆ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆ. ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಜಿ.ಪಂ. ಸದಸ್ಯ ನಾರಾಯಣ ನಾಯಕ್, ಮಂಜೇಶ್ವರ ಬ್ಲೋಕ್ ಸದಸ್ಯ ಅನಿಲ್ ಕುಮಾರ್, ಪಂ. ಸದಸ್ಯರಾದ ಎಂ. ಅನಿತ, ಪಿ. ಪ್ರೇಮ, ಕೇಶವ, ಇತರರಾದ ರಾಮಚಂದ್ರ ಮಾಸ್ತರ್, ಸದಾನಂದ ಶೇಣಿ, ಚನಿಯಪಾಡಿ, ದಿವಾಕರ, ಲಾವಣ್ಯಾಕ್ಷಿ ಮಾತನಾಡಿದರು. ಮೀನಾರಾಣಿ ಸ್ವಾಗತಿಸಿ, ತಿರುಮಲೇಶ್ ವಂದಿಸಿದರು. ೫೯ ಮನೆಗಳ ನವೀಕರಣೆ, ಕಮ್ಯುನಿಟಿ ಹಾಲ್ ನವೀಕರಣೆ, ರಸ್ತೆಗಳ ಕಾಂಕ್ರಿಟ್, ಕುಡಿಯುವ ನೀರು, ಸೋಲಾರ್ ಲೈಟ್ ಎಂಬಿ ಕಾಮಗಾರಿಗಳಿಗೆ ೯೮,೬೫,೧೨೮ ರೂ. ಮಂಜೂರು ಮಾಡಲಾಗಿದೆ. ಇದೇ ರೀತಿ ೯೮,೭೪,೨೪೧ ರೂ. ವೆಚ್ಚದಲ್ಲಿ ಮಂಗಲ್ಪಾಡಿ ಪಂಚಾಯತ್‌ನ ಪುಳಿಕುತ್ತಿ ಪರಿಶಿಷ್ಟ ಜಾತಿ ಕಾಲನಿಯನ್ನು ನವೀಕರಿಸುವ ಕಾಮಗಾರಿಯ ಉದ್ಘಾಟನೆಯನ್ನು ಕೂಡಾ ಶಾಸಕರು ನಿರ್ವಹಿ ಸಿದರು. ಪಂ. ಅಧ್ಯಕ್ಷೆ ಫಾತಿಮತ್ ರುಬಿನ ಸಹಿತ ಹಲವರು ಭಾಗವಹಿಸಿದರು.