ಎರಡೆಡೆಗಳಲ್ಲಿ ಪೊಲೀಸ್ ದಾಳಿ : ಗಾಂಜಾ ಸಹಿತ ಇಬ್ಬರ ಸೆರೆ
ಬದಿಯಡ್ಕ: ಬದಿಯಡ್ಕ ಪೊಲೀ ಸರು ನಿನ್ನೆ ಎರಡೆಡೆಗಳಲ್ಲಿ ದಾಳಿ ನಡೆಸಿ ಗಾಂಜಾ ಸಹಿತ ಇಬ್ಬರನ್ನು ಬಂಧಿಸಿ ಕೇಸು ದಾಖಲಿಸಿಕೊಂ ಡಿದ್ದಾರೆ.
ಇದರಂತೆ ಬದಿಯಡ್ಕ ಪೊಲೀಸ್ ಠಾಣೆಯ ಎಸ್‌ಐ ನಿಖಿಲ್ ಕೆ.ಕೆ ನೇತೃತ್ವದ ಪೊಲೀಸರು ಬೇಳ ಗ್ರಾಮದ ದರ್ಬೆತ್ತಡ್ಕ ಬಸ್ ತಂಗುದಾಣದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ 7.30 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಬೇಳದ ಅಬ್ದುಲ್ ರಹಿಮಾನ್ ಕೆ.ಎ (23) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.
ಇದೇ ರೀತಿ ಬೇಳ ಬಸ್ ತಂಗುದಾಣ ಬಳಿ ಬದಿಯಡ್ಕ ಪೊಲೀಸರು ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ 12.50 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿ ಬೇಳ ದರ್ಬೆತ್ತಡ್ಕ ಹೌಸ್‌ನ ಮೊಹಮ್ಮದ್ ಹನೀಫಾ ಡಿ (40) ಎಂಬಾತನನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.