ಎರಡೆಡೆ ನಡೆದ ಘಟನೆಗಳು: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸೇರಿ ಇಬ್ಬರು ಮೃತ್ಯು
ಕಾಸರಗೋಡು: ಕಾಸರಗೋಡಿನಲ್ಲಿ ನಿನ್ನೆ ಕೇವಲ 30 ನಿಮಿಷಗಳ ಅಂತರದಲ್ಲಾಗಿ ನಡೆದ ಎರಡು ದುರ್ಘಟನೆಗಳ ಲ್ಲಾಗಿ ವಿದ್ಯಾರ್ಥಿ ಸೇರಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಉದುಮ ಕೋಟೆಕುನ್ನು ಶಾಲೆ ಬಳಿ ನಿವಾಸಿ ಗಲ್ಫ್ ಉದ್ಯೋಗಿ ಅಬ್ದುಲ್ ಸತ್ತಾರ್- ಎರೋಲ್‌ನ ಫರೀದಾ ದಂಪತಿ ಪುತ್ರ ಉದುಮ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಎಸ್.ವಿ. ಅಬ್ದುಲ್ಲ (13) ಮತ್ತು ವೆಸ್ಟ್ ಎಳೇರಿ ಪರಂಬ ಕುಟ್ಟಿತ್ತಾನಿನ ಕಾಂತಮಲೆ ಜೋನಿ-ಜಾನ್ಸಿ ದಂಪತಿ ಪುತ್ರ ರಿಕ್ಷಾ ಚಾಲಕ ಅಬಿನ್ ಜೋನಿ (27) ಸಾವನ್ನಪ್ಪಿದ ದುರ್ದೈವಿಗಳು.
ಎಸ್.ವಿ. ಅಬ್ದುಲ್ಲ ನಿನ್ನೆ ಕುಟುಂಬ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ತನ್ನ ಸ್ನೇಹಿತರೊಂದಿಗೆ ಉದುಮ ಪಡಿಞ್ಞಾರ್ ನ್ಯೂಬಿನ್ ಹೊಳೆಯಲ್ಲಿ ಸ್ನಾನಕ್ಕಿಳಿದಾಗ ಆತ ನೀರಲ್ಲಿ ಮುಳುಗಿದ್ದಾನೆ. ಅದನ್ನು ಕಂಡ ಜತೆಗಿದ್ದ ಸ್ನೇಹಿತರು ಜೋರಾಗಿ ಬೊಬ್ಬೆ ಹಾಕಿದಾಗ ಪರಿಸರದ ನಿವಾಸಿಗಳು ಓಡಿ ಬಂದು ಎಸ್.ವಿ. ಅಬ್ದುಲ್ಲನನ್ನು ನೀರಿನಿಂದ ಮೇಲಕ್ಕೆತ್ತಿ ಉದುಮದ ಆಸ್ಪತ್ರೆಯೊಂದಕ್ಕೆ ಸಾಗಿಸಿದರೂ ಫಲಕಾರಿಯಾಗದೆ ಆ ವೇಳೆ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮೃತನು ಹೆತ್ತವರ ಹೊರತಾಗಿ ಸಹೋದರರಾದ ರಿಫಾಸ್, ಮೊಹಮ್ಮದ್ ಕುಂಞಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.
ಅಬಿನ್ ಜೋನಿ ಚೈತ್ರವಾಹಿನಿ ಹೊಳೆಯ ಪ್ಲಾಚಿಕರೆಗೆ ಸಮೀಪದ ನರಂಬಚ್ಚೇರಿ ಅಣೆಕಟ್ಟಿನಲ್ಲಿ ಸ್ನೇಹಿತರೊಂದಿಗೆ ನಿನ್ನೆ ಸಂಜೆ ಸ್ನಾನಕ್ಕಿಳಿದಾಗ ನೀರಿನಲ್ಲಿ ಮುಳುಗಿದ್ದಾರೆ. ಅದನ್ನು ಕಂಡ ಜತೆಗಿದ್ದವರು ಅವರನ್ನು ನೀರಿನಿಂದ ಮೇಲಕ್ಕೆತ್ತುವಷ್ಟರಲ್ಲಿ ಅಬಿನ್ ಸಾವನ್ನಪ್ಪಿದ್ದರು. ಮೃತದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪ ಡಿಸಲಾಯಿತು. ಮೃತರು ಹೆತ್ತವರ ಹೊರತಾಗಿ ಸಹೋದರರಾದ ಅಲ್‌ಬಿನ್, ಅಲ್ಬರ್ಟ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.