ಎರಿಯಾಲ್‌ನಲ್ಲಿ ಎತ್ತರದ ರಸ್ತೆ: ಸ್ಥಳೀಯರಿಗೆ ಸಂಚಾರ ಸಮಸ್ಯೆ
ಎರಿಯಾಲ್: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಂಗವಾಗಿ ಎರಿಯಾಲ್ ಸೇತುವೆ ಬಳಿ ಸರ್ವೀಸ್ ರಸ್ತೆ ಸೇತುವೆಗೆ ಸಂಪರ್ಕಿಸುತ್ತಿರುವುದರಿಂದಾಗಿ ರಸ್ತೆಯ ಎತ್ತರ ಹೆಚ್ಚಾಗುತ್ತಿದೆ. ಇದರಿಂದ ಸಮೀಪದ ಮಸೀದಿ ಸಹಿತ ಹತ್ತರಷ್ಟು ಕುಟುಂಬಗಳಿಗೆ ಸಂಕಷ್ಟ ತರಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಭೂಮಿ ಹಾಗೂ ಮಸೀದಿಯನ್ನು ಬಿಟ್ಟುಕೊಟ್ಟು ಹೊಸತಾಗಿ ಮಸೀದಿ ನಿರ್ಮಿಸಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ. ಆದರೆ ಹೊರತಾಗಿ ನಿರ್ಮಿಸಿದ ಮಸೀದಿ ರಸ್ತೆ ಎತ್ತರವಾದ ಕಾರಣ ತಗ್ಗಾಗಲಿದೆ. ಇದರಿಂದಾಗಿ ಈ ಮಸೀದಿಗೆ ತಲುಪುವವರಿಗೆ ಸಮಸ್ಯೆಯಾಗಲಿದೆ. ಅಲ್ಲದೆ ಮಳೆಗಾಲದಲ್ಲಿ ನೀರು ಮಸೀದಿಯೊಳಗೆ ನುಗ್ಗಲಿದೆ.
ರಾಷ್ಟ್ರೀಯ ಹೆದ್ದಾರಿಯ ಇಕ್ಕಡೆಗಳಲ್ಲಾಗಿ ನಿರ್ಮಿಸುವ ಸರ್ವೀಸ್ ರಸ್ತೆಯನ್ನು ಸ್ಥಳೀಯರಿಗೆ ತೊಂದರೆಯಾಗದಂತೆ ನಿರ್ಮಿಸಲಾಗುತ್ತಿದ್ದರೂ, ಇಲ್ಲಿ ಒಂದೂವರೆ ಮೀಟರ್ ಎತ್ತರದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಸರ್ವೀಸ್ ರಸ್ತೆಯನ್ನು ಜನರ ಸಂಚಾರ ಸುಗಮಗೊಳಿಸುವಂತೆ ನಿರ್ಮಿಸಬೇಕು ಇಲ್ಲದಿದ್ದರೆ ತೀವ್ರ ಆಂದೋಲನ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.