ಎಲ್ಲಾ ಸರಕಾರಿ ಕಚೇರಿಗಳ ನಾಮಫಲಕಗಳು ಇನ್ನು ಮಲಯಾಳದಲ್ಲಿ : ಕನ್ನಡ ಫಲಕಗಳು ಇಲ್ಲದಾಗಲಿದೆಯೇ?

ಕಾಸರಗೋಡು: ರಾಜ್ಯ ಸರಕಾರದ ಎಲ್ಲಾ ಸರಕಾರಿ ಕಚೇರಿಗಳ ನಾಮಫಲಕಗಳು ಇನ್ನು ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ಪ್ರದರ್ಶಿಸುವಂತೆ ಅಧಿಕಾರಿ ಆಡಳಿತ ಸುಧಾರಣಾ ಇಲಾಖೆ ನಿರ್ದೇಶ ನೀಡಿದೆ.

ನಾಮಫಲಕದ ಅರ್ಧ ಭಾಗದಲ್ಲಿ  ಮಲಯಾಳಂನಲ್ಲೂ ಇನ್ನರ್ಧ ಭಾಗ ದಲ್ಲಿ  ಇಂಗ್ಲಿಷ್‌ನಲ್ಲೂ ಪ್ರದರ್ಶಿ ಸಬೇಕು. ಇದು ಮಾತ್ರವಲ್ಲ  ಸರಕಾರಿ ವಾಹನಗಳಲ್ಲಿ ಮುಂದಿನ ಮತ್ತು ಹಿಂದಿನ ಭಾಗಗಳಲ್ಲ್ಲಿ ಮಲಯಾಳಂ ಮತ್ತು ಇಂಗ್ಲೀಷ್ ನಾಮಫಲಕ ಅಳವಡಿಸಬೇಕು. 

ಕಚೇರಿಗಳ ಮೊಹರುಗಳು, ಅಧಿಕಾರಿಗಳ ಹೆಸರು ಮತ್ತು ಅವರು ವಹಿಸುವ ಔದ್ಯೋಗಿಕ ಸ್ಥಾನದ ಮೊಹರುಗಳನ್ನು ಇಂಗ್ಲಿಷ್‌ನ ಹೊರತಾಗಿ ಮಲಯಾಳಂನಲ್ಲ್ಲೂ ತಯಾರಿಸಬೇಕು.  ಸರಕಾರಿ ಕಚೇರಿಗಳ ಹಾಜರುಪಟ್ಟಿ ಇತ್ಯಾದಿ ಎಲ್ಲಾ ರಿಜಿಸ್ಟರ್  ಪುಸ್ತಕಗಳನ್ನೂ ಮಲಯಾಳಂನಲ್ಲಿ ತಯಾರಿಸಬೇಕು. ಮಾತ್ರವಲ್ಲ ಎಲ್ಲಾ ಕಡತಗಳನ್ನು ಪೂರ್ಣ  ವಾಗಿ ಮಲಯಾಳದಲ್ಲಾಗಿಸಬೇಕೆಂ ದು ಇಲಾಖೆ ಹೊರಡಿಸಿದ ಸುತ್ತೋಲೆ ಯಲ್ಲಿ ಸ್ಪಷ್ಟಪಡಿಸಲಾಗಿದೆ.

ಇದು ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು  ಜಿಲ್ಲೆಗೂ ಸಮಾನವಾಗಿ ಅನ್ವಯ ಗೊಳ್ಳಲಿದೆ. ಹೊಸ ಸುತ್ತೋಲೆಯಿಂ ದಾಗಿ ಕಾಸರಗೋಡು ಜಿಲ್ಲೆಯ ಎಲ್ಲ್ಲಾ  ಸರಕಾರಿ ಕಚೇರಿ ಮತ್ತು ಅವುಗಳ ವಾಹನಗಳಲ್ಲಿ ಕನ್ನಡ ನಾಮಫಲಕಗಳು ಇನ್ನು ಮಾಯವಾಗಲಿದೆಯೇ ಎಂಬ ಆತಂಕ ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರಲ್ಲಿ ಈಗ ಉಂಟಾಗತೊಡಗಿದೆ. ಆ ಬಗ್ಗೆ ಇಲಾಖೆ ತನ್ನ ಸುತ್ತೋಲೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ.

Leave a Reply

Your email address will not be published. Required fields are marked *

You cannot copy content of this page