ಎಸ್ಎಸ್ಎಲ್ಸಿ ಪರೀಕ್ಷೆ ಉತ್ತೀರ್ಣರಾಗಿರುವುದು 4.24 ಲಕ್ಷ ಮಂದಿ, ಪ್ಲಸ್ವನ್ ಸೀಟು 4.74 ಲಕ್ಷ


ಕಾಸರಗೋಡು: ರಾಜ್ಯದಲ್ಲಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇ. 99.5 ಮಂದಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆಯಾಗಿ 4,24,583 ವಿದ್ಯಾರ್ಥಿಗಳು ತಮ್ಮ ಮಂದಿನ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ.
ಹೈಯರ್ ಸೆಕೆಂಡರಿಯಲ್ಲಿ 4,41,887 ಸೀಟುಗಳು ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ವಿಭಾಗದಲ್ಲಿ 33,030 ಸೀಟುಗಳು ಸೇರಿ ಪ್ಲಸ್ವನ್ನಲ್ಲಿ ಒಟ್ಟು 4,74,917 ಸೀಟುಗಳಿವೆ. ಅಂದರೆ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಸಂಖ್ಯೆಗಿAತಲೂ ಹೆಚ್ಚು ಸೀಟುಗಳು ಹೈಯರ್ ಸೆಕೆಂಡರಿ ವಿಭಾಗದಲ್ಲಿದೆ. ರಾಜ್ಯದಲ್ಲಿ ಒಟ್ಟಾರೆ ಯಾಗಿ ಈಬಾರಿ 4,26,697 ಮಂದಿ ಪರೀಕ್ಷೆಗೆ ಬರೆದಿದ್ದು,ಅದರಲ್ಲಿ 4,24,583 (ಶೇ. 99.5) ಮಂದಿ ತೇರ್ಗಡೆಹೊಂದಿದ್ದಾರೆ. 61,449 ಮಂದಿ ಫುಲ್ ಎ ಪ್ಲಸ್ ಪಡೆದಿದ್ದಾರೆ. 2331 ಶಾಲೆಗಳಲ್ಲಿ ಪರೀಕ್ಷೆಗೆ ಬರೆದ ಎಲ್ಲರೂ ಉತ್ತೀರ್ಣರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page