ಎಸ್‌ಐಗೆ ಹಲ್ಲೆ : ಯುವಕನ ವಿರುದ್ಧ ಕೇಸು
ಕಾಸರಗೋಡು: ದೂರಿನ ಬಗ್ಗೆ ತನಿಖೆ ನಡೆಸಲು ಹೋದ ಎಸ್‌ಐ ಮೇಲೆ ಹಲ್ಲೆ ನಡೆಸಿದ ಆರೋಪದಂತೆ ಯುವಕನ ವಿರುದ್ಧ ಬೇಕಲ ಪೊಲೀ ಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬೇಕಲ ಉಸ್ಮಾನಿಯ ನಗರದ ಕುರುಚ್ಚಿಕುನ್ನಿನ ಕಣ್ಣನ್ (29) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಬೇಕಲ ಉಸ್ಮಾ ನಿಯ ನಗರದ ಕುರುಚ್ಚಿಕುನ್ನಿನಲ್ಲಿ ಪತಿ ಪತ್ನಿಗೆ ಹಲ್ಲೆ ನಡೆಸುತ್ತಿರುವ ಬಗ್ಗೆ ಬೇಕಲ ಪೊಲೀಸರಿಗೆ ಸಂದೇಶ ಲಭಿಸಿತ್ತು. ಅದರಂತೆ ಆ ಬಗ್ಗೆ ತನಿಖೆ ನಡೆಸಲು ಎಸ್‌ಐ ಆಜೆಯ್ ಎಸ್ ನೇತೃತ್ವದ ಪೊಲೀಸರು ಅಲ್ಲಿಗೆ ಹೋದಾಗ ಪತ್ನಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದಾಗ ಎಸ್‌ಐ ಮತ್ತು ಅವರ ಜೊತೆಗಿದ್ದ ಪೊಲೀಸರನ್ನು ಕಣ್ಣನ್ ತಡೆದು ಎಸ್‌ಐ ಮೇಲೆ ಹಲ್ಲೆ ನಡೆಸಿರು ವುದಾಗಿ ಆರೋಪಿಸಲಾಗಿದೆ.ಕೈಗೆ ಗಾಯಗೊಂಡ ಎಸ್‌ಐಗೆ ನಂತರ ಚಿಕಿತ್ಸೆ ನೀಡಲಾಗಿದೆ. ಆ ಬಗ್ಗೆ ಅವರು ನೀಡಿದ ದೂರಿನಂತೆ ಬೇಕಲ ಪೊಲೀಸರು ಕಣ್ಣನ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.