ಎಸ್ವಿಟಿ ಫ್ರೆಂಡ್ಸ್ ಸರ್ಕಲ್ನಿಂದ ಮಾಜಿ ಕಾರ್ಯದರ್ಶಿ ನಿಧನಕ್ಕೆ ಸಂತಾಪ
ಕಾಸರಗೋಡು ಎಸ್.ವಿ.ಟಿ. ಫ್ರೆಂಡ್ಸ್ ಸರ್ಕಲ್ ಇದರ ಮಾಜಿ ಕಾರ್ಯದರ್ಶಿ ಮಹೇಶ್ .ಕೆ ಇವರ ನಿದsನಕ್ಕೆ ಸಂತಾಪ ಕಾರ್ಯಕ್ರಮ ಜರಗಿತು. ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಮೃತರ ಸಹೋದರ ರವಿರಾಜ್.ಕೆ ದೀಪ ಪ್ರಜ್ವಲಿಸಿ ಪುಷ್ಪಾರ್ಚನೆಗೈದರು. ಎಸ್.ವಿ.ಟಿ. ಯ ಸ್ಥಾಪಕ ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ, ಉದ್ಯಮಿ ರಾಮ್ ಪ್ರಸಾದ್ ಕಾಸರಗೋಡು, ವಾರ್ಡ್ ಕೌನ್ಸಿಲರ್ ಶ್ರೀಲತಾ ಟೀಚರ್, ಉದ್ಯಮಿ ಗÀÄರುಪ್ರಸಾದ್ ಪ್ರಭು ನುಡಿನಮನ ಸಲ್ಲಿಸಿದರು. ಹರೀಶ್ ಎಸ್.ವಿ.ಟ ಪ್ರಾಸ್ತಾವಿಕ ನುಡಿಗಳನ್ನಾಡಿ ದರು,ಎಸ್.ವಿ.ಟಿ ಕಾರ್ಯಕರ್ತರಾದ ಜಿತಿನ್ ಶೆಟ್ಟಿ, ಭರತ್ ಶೆಟ್ಟಿ, ರಾಜೇಶ್ ಪೂಜಾರಿ, ಗೋಕುಲ್, ಕಿರಣ್ ರಾಜ್ ಶೆಟ್ಟಿ, ವಸಂತ್ ಕೆರೆಮನೆ, ರೂಪಕಲಾ, ಸವಿತಾ, ಪ್ರೇಮಾ, ಅರುಣ, ಸೂರ್ಯ ಕಾಂತಿ ಭಾಗವಹಿಸಿದರು. ಕಿಶೋರ್ ಕುಮಾರ್, ಎಸ್.ವಿ.ಟಿ ಕೆ.ಎನ್. ರಾಮಕೃಷ್ಣ ಹೊಳ್ಳ ಉಪಸ್ಥಿತರಿದ್ದರು.