ಏಳನೇ ತರಗತಿ ವಿದ್ಯಾರ್ಥಿಯಿಂದ ಮುಖ್ಯಮಂತ್ರಿಗೆ ಕೊಲೆ ಬೆದರಿಕೆ

ತಿರುವನಂತಪುರ: ೭ನೇ ತರಗತಿ ವಿದ್ಯಾರ್ಥಿಯೋರ್ವ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ರಿಗೆ ಫೋನ್ ಕರೆ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದಾನೆ. ಮಾತ್ರವಲ್ಲ ಹೀನಾಯವಾಗಿ ಬೈದಿದ್ದಾನೆ. ಆ ಬಗ್ಗೆ ತಿರುವನಂತಪುರ ಮ್ಯೂಸಿಯಂ ಪೊಲೀಸರು ನಡೆಸಿದ ತನಿಖೆಯಲ್ಲಿ ಹೀಗೆ ಬೆದರಿಕೆ ಸಂದೇಶ ಒಡ್ಡಿರು ವುದು ಎರ್ನಾಕುಳಂ ನಿವಾಸಿಯಾಗಿ ರುವ ಬಾಲಕನಾಗಿರು ವುದನ್ನು ಪತ್ತೆ ಹಚ್ಚಲಾಗಿದೆ. ನಿನ್ನೆ ಸಂಜೆ ೫ ಗಂಟೆಗೆ ಮುಖ್ಯ ಮಂತ್ರಿಗೆ ಬೆದರಿಕೆ ಫೋನ್ ಸಂದೇಶ ಬಂದಿದೆ. ಆ ಕೂಡಲೇ ನೀಡಲಾದ ದೂರಿನಂತೆ  ಪೊಲೀ ಸರು ತುರ್ತು     ಕಾರ್ಯಾಚರಣೆಗಿಳಿದು ನಡೆಸಿದ ತನಿಖೆಯಲ್ಲಿ ಆ ಫೋನ್ ಕರೆ ಮಾಡಿದ್ದು ಬಾಲಕನಾಗಿರುವುದಾಗಿ ಸ್ಪಷ್ಟಗೊಂಡಿದೆ. ಊದರೆ ಅದು ಪ್ರಾಯಪೂರ್ತಿಯಾಗದ ಬಾಲಕನಾಗಿರುವ ಕಾರಣದಿಂದಾಗಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ. ಆತನನ್ನು ಕೌನ್ಸಿಲಿಂಗ್‌ಗೆ ಒಳಪಡಿಸಲು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page