ಏಳು ತಿಂಗಳ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ
ಇಡುಕ್ಕಿ: ಏಳು ತಿಂಗಳ ಮಗುವನ್ನು ಕೊಲೆಗೈದ ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಇಡುಕ್ಕಿ ತೋಪ್ರಾಂಕುಡಿ ಎಂಬಲ್ಲಿ ನಡೆದಿದೆ. ಸ್ಕೂಲ್ ಸಿಟಿ ಪುತ್ತನ್ ಪುರಯ್ಕಲ್‌ನ ಡೀನು ಲೂಯಿಸ್ (೩೫) ಎಂಬಾಕೆ ಸಾವಿಗೀಡಾದ ಯುವತಿ. ಡೀನುವಿನ ಪತಿ ಲೂಯಿಸ್ ಐದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನ್ನಲಾಗಿದೆ. ಇಂದು ಬೆಳಿಗ್ಗೆ ಡೀನು ಹಾಗೂ ಮಗು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಸಂಬಂಧಿಕರು ಇಡುಕ್ಕಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.