ಐಎಸ್‌ಆರ್‌ಒ ಯುವ ವಿಜ್ಞಾನಿ ಸೂರ್ಲು ನಿವಾಸಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಬಾಹ್ಯಾಕಾಶರಂ ಗದಲ್ಲಿ ನೂತನ ಸಾಧನೆಗೈದ ಭಾರತದ ಚಂದ್ರಯಾನ್-೩ರಲ್ಲಿ ಭಾಗಿಯಾಗಿದ್ದ ಯುವ ವಿಜ್ಞಾನಿ ಹೃದಯಾಘಾತ ದಿಂದ ನಿಧನ ಹೊಂದಿದರು. ಸೂರ್ಲು ನಿವಾಸಿ ಪ್ರಸ್ತುತ ಬೆಂಗಳೂರಲ್ಲಿ ವಾಸವಾಗಿದ್ದ ಅಶೋಕ್ (೪೩) ಮೃತ ಪಟ್ಟವರು. ಇವರಿಗೆ ಮಂಡಿನೋವು ಆಗಿ ಆಪರೇಶನ್ ನಡೆಸಿ ವಿಶ್ರಾಂತಿ ಯಲ್ಲಿದ್ದ ವೇಳೆ ನಿನ್ನೆ ಹೃದಯಾಘಾತ ಉಂಟಾಗಿ ಸಾವು ಸಂಭವಿಸಿದೆ. ಇವರ ಪತ್ನಿ ಮಶ್ಯಾಂಕ್ ಕೂಡಾ ಐಎಸ್ ಆರ್‌ಒದಲ್ಲಿ ಉದ್ಯೋಗದಲ್ಲಿದ್ದಾರೆ.

ಚಂದ್ರಯಾನ್‌ನ ಯಶಸ್ವಿಯ ಬಳಿಕ ಸೂರ್ಲು ಗಣೇಶ ಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯ ಕ್ರಮದಲ್ಲಿ ಇವರನ್ನು ಗೌರವಿಸಲಾಗಿತ್ತು. ಕಟ್ಟಕಡೆಯದಾಗಿ ಅದಕ್ಕಾಗಿ ಅಶೋಕ್ ಊರಿಗೆ ತಲುಪಿದ್ದರು. ಜೊತೆಗೆ ಇತರ ಸಂಘ ಸಂಸ್ಥೆಗಳ ವತಿಯಿಂದಲೂ ಅಭಿನಂದಿಸಲಾಗಿತ್ತು. ಜೈ ಹಿಂದ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯಕರ್ತರಾಗಿದ್ದರು.

ಕೂಡ್ಲು  ಗೋಪಾಲಕೃಷ್ಣ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಕೈಗೊಂಡ ಇವರು ಬಳಿಕ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಕೈಗೊಂಡು ಪೆರಿಯ ಪಾಲಿಟೆಕ್ನಿಕ್‌ನಲ್ಲಿ ಮೂರು ವರ್ಷದ ಡಿಪ್ಲೊಮ ನಡೆಸಿದ ಬಳಿಕ ತಿರುವನಂತಪುರ ಐಎಸ್‌ಆರ್‌ಒದಲ್ಲಿ ಟ್ರೈನಿಯಾಗಿ ಸೇರಿದ್ದರು. ಬಳಿಕ ಬೆಂಗಳೂರಿನ ಐಎಸ್‌ಆರ್‌ಒದಲ್ಲಿ ಉದ್ಯೋಗ ಲಭಿಸಿದ್ದು, ಅಲ್ಲಿಂದ ಉನ್ನತ ಶಿಕ್ಷಣ ಕೈಗೊಂಡು ಭಡ್ತಿ ಪಡೆದಿದ್ದರು.

ಮೃತದೇಹವನ್ನು ಹುಟ್ಟೂರಿಗೆ ತಂದು ಮಧ್ಯಾಹ್ನ ವೇಳೆ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಇವರ ತಂದೆ ಪುಟ್ಟಣ್ಣ ಈ ಹಿಂದೆ ನಿಧನರಾಗಿದ್ದಾರೆ. ಮೃತರು  ತಾಯಿ ನಾಗವೇಣಿ, ಪತ್ನಿ, ಮಕ್ಕಳಾದ ರೆಯಾಂಶ್, ಹಿಯ, ಸಹೋದರ- ಸಹೋದರಿಯರಾದ ಸೀತಾರಾಮ, ಪುಷ್ಪಲತಾ, ಜಯಲಕ್ಷ್ಮಿ,  ಪದ್ಮನಾಭ, ಭವಾನಿ, ರೋಹಿತ್, ದೀಕ್ಷಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಯುವ ವಿಜ್ಞಾನಿಯ ಅಗಲಿಕೆಗೆ ಸೂರ್ಲು ಪರಿಸರದ ಗೆಳೆಯರು ಕಂಬನಿ ಸುರಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page