ಐದನೇ ದಿನಕ್ಕೆ ಕಾಲಿರಿಸಿದ ಆಶಾ ಕಾರ್ಯಕರ್ತೆಯರ ಉಪವಾಸ ಸತ್ಯಾಗ್ರಹ: ಐಕ್ಯದಾರ್ಢ್ಯ ಪ್ರದರ್ಶಿಸಿ ಸಾಮಾಜಿಕ ಕಾರ್ಯಕರ್ತೆಯರಿಂದ,  ಮನೆಗಳಲ್ಲೂ ನಿರಶನ

ತಿರುವನಂತಪುರ: ವಿವಿಧ ಬೇಡಿಕೆ ಗಳನ್ನು ಮುಂದಿರಿಸಿಕೊಂಡು ಸೆಕ್ರೆಟರಿ ಯೇಟ್ ಮುಂದೆ ಆಶಾ ಕಾರ್ಯಕ ರ್ತರು ಆರಂಭಿಸಿರುವ ಉಪವಾಸ ಸತ್ಯಾಗ್ರಹ ಇಂದಿಗೆ ಐದನೇ ದಿನಕ್ಕೆ ಕಾಲಿರಿಸಿದ್ದು, ಅವರಿಗೆ ಐಕ್ಯದಾರ್ಢ್ಯ ಪ್ರದರ್ಶನದ ಹಲವು ಸಾಮಾಜಿಕ ಕಾರ್ಯಕರ್ತರೂ  ಇಂದು ಅವರ ಜೊತೆ ನಿರಾಹಾರ ಸತ್ಯಾಗ್ರಹ ಆರಂಭಿಸಿದ್ದಾರೆ.

ಇದರ ಹೊರತಾಗಿ ನಿರಶನ ನಿರತರು ಮಾಡಿದ ಮನವಿ ಪ್ರಕಾರ ಎಲ್ಲಾ ಆಶಾ ಕಾರ್ಯಕರ್ತರ  ಮನೆಗಳಲ್ಲಿ  ಅವರ ಕುಟುಂಬದವರೂ ಇನ್ನೊಂದೆಡೆ ಇಂದು ಉಪವಾಸ ಸತ್ಯಾ ಗ್ರಹ ಆರಂಭಿಸಿದ್ದಾರೆ. ತಿರುವನಂತಪುರಕ್ಕೆ ಬಂದು ಸತ್ಯಾಗ್ರಹದಲ್ಲಿ ಭಾಗವಹಿಸಲು ಸಾಧ್ಯವಾಗದ ಆಶಾ ಕಾರ್ಯಕರ್ತೆ ಯರು ತಮ್ಮ ಸ್ಥಳೀಯ ಕೇಂದ್ರಗಳಲ್ಲಿ ನಿರಶನ ಆರಂಭಿಸುವಂತೆ ಸತ್ಯಾಗ್ರಹ ನಿರತರು ವಿನಂತಿಸಿಕೊಂಡಿದ್ದಾರೆ.

ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು, ನಿವೃತ್ತಿ ಸವಲತ್ತುಗಳನ್ನು ನೀಡಬೇಕು, ಪಿಂಚಣಿ ಖಾತರಿಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿಕೊಂಡು ಆಶಾ ಕಾರ್ಯಕರ್ತರು ಫೆಬ್ರವರಿ 10ರಂದು ಸೆಕ್ರೆಟರಿಯೇಟ್ ಮುಂದೆ ಮುಷ್ಕರ ಆರಂಭಿಸಿದ್ದರು. ಅದು ೩೯ ದಿನಗಳು ಮುಂದುವರಿದ ಬಳಿಕ ಆಶಾ ಕಾರ್ಯಕರ್ತೆಯರು ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದರು. ಅದು ಇಂದಿಗೆ ಐದನೇ ದಿನಕ್ಕೆ ಕಾಲಿರಿಸಿದೆ. ಇದರಂತೆ ಪ್ರತಿದಿನ ತಲಾ ಮೂವರು ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅದರಂತೆ ಇಂದು ಕೇರಳ ಆಶಾ ಹೆಲ್ತ್ ವರ್ಕರ್ಸ್ ಅಶೋಸಿಯೇ ಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ ಬಿಂದು, ಆಶಾ ಕಾರ್ಯಕರ್ತ ರಾದ ಕೆ.ಪಿ.ತಂಗಮಣಿ ಮತ್ತು ಎಂ. ಶೋಭ ನಿರಾಹಾರ ಸತ್ಯಾಗ್ರಹದಲ್ಲಿ ತೊಡಗಿದ್ದಾರೆ.

ಇಂದಿನ ಸತ್ಯಾಗ್ರಹವನ್ನು ಡಾ. ಪಿ. ಗೀತ ಉದ್ಘಾಟಿಸಿದರು. ಆದರೆ ಆಶಾ ಕಾರ್ಯಕರ್ತರ ಸತ್ಯಾಗ್ರಹ ರಾಜಕೀಯ ಪ್ರೇರಿತವಾದುದೆಂದು ರಾಜ್ಯ ಸರಕಾರ ಹೇಳಿದೆ. ಮಾತ್ರವಲ್ಲ ಆಶಾ ಕಾರ್ಯ ಕರ್ತರ ಬೇಡಿಕೆಗಳಿಗೆ ಪರಿಹಾರ ಕಂಡು ಕೊಳ್ಳುವ ಯಾವುದೇ ಕ್ರಮ ಸರಕಾರದ ವತಿಯಿಂದ ಈತನಕ ಉಂಟಾಗಿಲ್ಲ. ಸರಕಾರದ ಈ ನಿಲುವು ಆಶಾ ಕಾರ್ಯಕರ್ತೆಯರ ಹೋಟರಾಟವನ್ನು ಇನ್ನೂ ತೀವ್ರಗೊಳಿಸುವಂತೆ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page