ಐದು ಮಂದಿಯ ಕೊಲೆ ಆರೋಪಿಯ ಸಮಗ್ರ ತನಿಖೆ
ತಿರುವನಂತಪುರ: ವೆಂಞಾರ ಮೂಡ್‌ನಲ್ಲಿ ೫ ಮಂದಿಯನ್ನು ಕೊಲೆ ಗೈದ ಪ್ರಕರಣದ ಆರೋಪಿ ಅಫಾನ್ (23) ಎಂಬಾತನನ್ನು ಪೊಲೀಸರು ಸಮಗ್ರ ತನಿಖೆಗೊಳ ಪಡಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಫಾನ್‌ನ ಆರೋಗ್ಯ ಸ್ಥಿತಿ ಸುಧಾರಿಸಿದೆಯೆಂದು ಆಸ್ಪತ್ರೆ ಯಿಂದ ಬಿಡುಗಡೆಗೊಂಡ ತಕ್ಷಣ ತನಿಖೆ ಗೊಳಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಸಮಗ್ರವಾಗಿ ತನಿಖೆಗೊಳ ಪಡಿಸಿದರೆ ಮಾತ್ರವೇ ಕೊಲೆಕೃತ್ಯಕ್ಕೆ ಕಾರಣವೇನೆಂದು ತಿಳಿಯಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.