ಐಲದಲ್ಲಿ ಡಾ. ಪ್ರಭಾಕರ ಭಟ್ರಿಂದ ಅಯೋಧ್ಯಾ ಆಂದೋಲನ ಕಥನ
ಉಪ್ಪಳ: ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾಸರಗೋಡು ಜಿಲ್ಲೆ ಇದರ ಆಶ್ರಯದಲ್ಲಿ ಅಯೋಧ್ಯಾ ಆಂದೋಲನದ ಪ್ರತ್ಯಕ್ಷ ಅನುಭವದ ಪ್ರೇರಣಾದಾಯಿ ಕಥನವನ್ನು ಡಾ.ಪ್ರಭಾಕರ ಭಟ್ ಕಲ್ಲಡ್ಕ ನಿನ್ನೆ ಐಲದಲ್ಲಿ ವಿವರಿಸಿದರು. ನಿವೃತ್ತ ಮುಖ್ಯೋಪಧ್ಯಾಯ ದೇವಪ್ಪ ಶೆಟ್ಟಿ ಚಾವಡಿಬೈಲು ಅಧ್ಯಕ್ಷತೆ ವಹಿಸಿದರು. ವಿ.ಎಚ್.ಪಿ ಜಿಲ್ಲಾ ಉಪಾಧ್ಯಾಕ್ಷ ಬಾಲಕೃಷ್ಣ ಶೆಟ್ಟಿ, ಆರ್.ಎಸ್.ಎಸ್ ಕಣ್ಣೂರು ವಿಭಾಗ ಸಹ ಕಾರ್ಯವಾಹ ಲೊಕೇಶ್ ಜೋಡುಕಲ್ಲು ಉಪಸ್ಥಿತರಿದ್ದರು. ಸಂಘಪರಿವಾರದ ಮುಖಂಡರಾದ ಗೋಪಾಲ ಚೆಟ್ಟಿಯಾರ್, ವೀರಪ್ಪ ಅಂಬಾರು, ಜಯಂತಿ ಅಮ್ಮ, ಸುರೇಶ್ ಶೆಟ್ಟಿ ಪರಂಕಿಲ, ಯಾದವ್ ಕೀರ್ತೇಶ್ವರ, ಸೌಮ್ಯ ಭಟ್ ಮದಂಗಲ್ಲು, ಪದ್ಮಾವತಿ ಟೀಚರ್, ನಾರಾಯಣ ಭಟ್, ಪ್ರೇಂಕುಮಾರ್ ಐಲ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ವಿ.ಎಚ್.ಪಿ ಜಿಲ್ಲಾ ಪ್ರಮುಖ್ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ. ಜಿಲ್ಲಾ ಉಪಾಧ್ಯಾಕ್ಷ ಶಂಕರ ಭಟ್ ಉಳುವಾನ ವಂದಿಸಿದರು. ಕಿಶೋರ್ ಕುಮಾರ್ ಪೆರ್ಲ ಪ್ರಾರ್ಥನೆ ಹಾಡಿದರು. ಶಿವಾನಂದ ಕುಂಬಳೆ ನಿರೂಪಿಸಿದರು.