ಐಲ ಶಿವಾಜಿನಗರದಲ್ಲಿ ಕಡಲ್ಕೊರೆತ: ರಸ್ತೆ, ಮನೆಗಳು ಅಪಾಯದಂಚಿನಲ್ಲಿ; ಆತಂಕಗೊಂಡ ಸ್ಥಳೀಯರು
ಉಪ್ಪಳ: ಮಳೆ ಆರಂಭ ಗೊಂಡಿರುವಂತೆ ಐಲ ಶಿವಾಜಿ ನಗರದಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದೆ. ಹಲವಾರು ಗಾಳಿ ಮರಗಳು ಸಮುದ್ರ ಪಾಲಾಗಿದೆ. ಇತ್ತೀಚೆಗೆ ಆರಂಭಗೊಂಡ ಕಡಲ್ಕೊರೆತ ಮುಂದುವರಿಯುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಇನ್ನು ಮುಂದುವರಿದಲ್ಲಿ ಪರಿಸರದ ರಸ್ತೆ, ವಿದ್ಯುತ್ ಕಂಬಗಳು, ಸಮುದ್ರಪಾಲಾಗಿ ಮನೆಗಳಿಗೂ ಅಪಾಯ ಉಂಟಾಗಲಿದೆ. ಕಳೆದ ವರ್ಷ ಕೂಡಾ ನೂರಾರು ಗಾಳಿಮರಗಳು ಸಮುದ್ರ ಪಾಲಾಗಿವೆ. ಮೀನು ಕಾರ್ಮಿಕರು ಆತಂಕದಿಂ ದಲೇ ದಿನ ಕಳೆಯುವಂತಾಗಿದೆ. ಈ ಪರಿಸರದಲ್ಲಿ ತಡೆಗೋಡೆ ನಿರ್ಮಿಸಲು ಹಲವು ವರ್ಷಗಳಿಂದ ಒತ್ತಾ ಯಿಸುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಮೀನು ಕಾರ್ಮಿಕರು ದೂರಿದ್ದಾರೆ.