ಐಸಿಸ್ ದಾಳಿ ಸಂಚು: ದೇಶದ ೪೪ ಕಡೆ ಏಕಕಾಲದಲ್ಲಿ ಎನ್‌ಐಎ ದಾಳಿ

ನವದೆಹಲಿ: ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಜಾಗತಿಕ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ (ಐಸಿಸ್) ದಾಳಿ ನಡೆಸಲು ಸಂಚು ಹೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ, ಮಹಾರಾಷ್ಟ್ರಮತ್ತಿತರ ಹಲವೆಡೆಗಳಲ್ಲಿ ಏಕಕಾಲದಲ್ಲಿ ದಾಳಿ ಆರಂಭಿಸಿದೆ.

ಇಂದು ಬೆಳಿಗ್ಗೆ ಆರಂಭಗೊಂಡ ಎನ್‌ಐಎ ದಾಳಿ ದೇಶದ ೪೪ ಕೇಂದ್ರಗಳಲ್ಲಿ ಮುಂದುವರಿಯು ತ್ತಿದೆ. ಕರ್ನಾಟಕದ ಒಂದು, ಪುಣೆಯ ೨, ಥಾಣೆ ಗ್ರಾಮೀಣದ – ೩೧, ನಗರದ ೯ ಸೇರಿದಂತೆ ಹಲವು ಕೇಂದ್ರಗಳಲ್ಲೂ ದಾಳಿ ನಡೆಯುತ್ತಿದೆ. ದಾಳಿಯಲ್ಲಿ ಹಲವು ದೇಶಗಳಿಂದ ಹಲವು ದಾಖಲು ಪತ್ರ ಮತ್ತೆ ಇತರ ಪುರಾವೆಗಳನ್ನು ಎನ್‌ಐಎ ಸಂಗ್ರಹಿಸಿದೆ ಎಂದು ಸುದ್ಧಿ ಮಾಧ್ಯಮಗಳು ವರದಿ ಮಾಡಿವೆ. ಐಸಿಸ್ ಉಗ್ರ ಸಂಘಟನೆ ಯೊಂದಿಗೆ ನಂಟು ಹೊಂದಿರುವು ದಾಗಿ ಹೇಳಲಾಗುತ್ತಿರುವ ಮೋಸ್ಟ್ ವಾಂಟೆಡ್ ಭಯೋ ತ್ಪಾದಕ ಶಹನಾಜ್ ಅಲಿಯಾಸ್ ಶಫಿ ಉಜ್ ಎಂಬಾತನನ್ನು ದೆಹಲಿ ಪೊಲೀಸರು ಇನ್ನೊಂದೆಡೆ ಬಂಧಿಸಿದ್ದು, ಇದಕ್ಕೆ ಸಂಬಂಧಿಸಿ ಕರ್ನಾಟಕ ಪೊಲೀಸರೂ ದೆಹಲಿ ಪೊಲೀಸರೊಂದಿಗೆ ಸಂಪರ್ಕ ದಲ್ಲಿದ್ದಾರೆ. ಆತ ಕರ್ನಾಟಕ ಮಾತ್ರವಲ್ಲ ಕೇರಳದೊಂ ದಿಗೂ ನಂಟು ಹೊಂದಿರುವುದಾಗಿಯೂ ಹೇಳಲಾಗು ತ್ತಿದೆ. ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ದೊಂದಿಗ ಈತ ನಂಟು ಹೊಂದಿದ್ದಾನೆ. ಆತನ ನೇತೃತ್ವದಲ್ಲಿ ಹಲವೆಡೆಗಳಲ್ಲೂ ಅತೀ ಗುಪ್ತವಾಗಿ ಐಸಿಸ್ ತರಬೇತಿಯನ್ನು ನೀಡಿರುವ ಶಂಕೆಯನ್ನೂ ದಿಲ್ಲಿ ಪೊಲೀ ಸರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಎನ್‌ಐಎ ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯ ಗುಪ್ತಚರ ವಿಭಾಗಗಳೂ ಇನ್ನೊಂದೆಡೆ ತನಿಖೆ ಆರಂಭಿಸಿವೆ.

Leave a Reply

Your email address will not be published. Required fields are marked *

You cannot copy content of this page