‘ಒಂದು ದೇಶ, ಒಂದು ಚುನಾವಣೆ’ : ಶಿಫಾರಸ್ಸು ಇಂದು ರಾಷ್ಟ್ರಪತಿಗೆ ಸಲ್ಲಿಕೆ

ನವದೆಹಲಿ: ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ  ನಡೆಸಲು ರಚಿಸಲಾದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರ ನೇತೃತ್ವದ ಸಮಿತಿ ತನ್ನ ವರದಿಯನ್ನು ಅಂತಿಮಗೊಳಿಸಿದ್ದು, ಅದನ್ನು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಸಲ್ಲಿಸಲಾಗುವುದು. ಇದಕ್ಕೆ ಅಂಗೀಕಾರ ಲಭಿಸಿದಲ್ಲಿ ಇನ್ನು ಸಂಸತ್ತು, ವಿಧಾನಸಭೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಮಾತ್ರವಲ್ಲ ದೇಶದ ಆರ್ಥಿಕತೆ ಮತ್ತು ಸಮಾಜಕ್ಕೆ ಪದೇ ಪದೇ ಚುನಾವಣೆಗಳಿಂದ ಉಂಟಾಗುವ ಸಮಸ್ಯೆಗಳಿಂದ ರಕ್ಷಿಸಬಹುದು.

ದೇಶದ ಕೆಲವು ರಾಜ್ಯಗಳಿಗೆ ವಿಭಿನ್ನ ಸಮಯಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ಅದೇ ರೀತಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಯೂ ವಿಭಿನ್ನ ಸಮಯಗಳಲ್ಲಾಗಿ ನಡೆಯುತ್ತಿದೆ. ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಾಗಿ ವರ್ಷದಲ್ಲಿ ಸುಮಾರು ೨೦೦ರಿಂದ ೩೦೦ ದಿನಗಳು  ಕಳೆಯಬೇಕಾಗಿ ಬರುತ್ತಿದೆ. ದೇಶದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಮಾದರಿಯನ್ನು ಜ್ಯಾರಿಗೆ ತರುವ ಮೊದಲು ಅನೇಕ ಬದಲಾವಣೆಗಳನ್ನು ತರಬೇಕಾದ ಅಗತ್ಯವಿದೆ. ಎಲ್ಲಾ ಚುನಾವಣೆಗಳಿಗೆ ಮತದಾರರ ಯಾದಿಯನ್ನು ಅಳವಡಿಸಬೇಕಾಗುತ್ತಿದೆ. ಇದಲ್ಲದೆ ಇದಕ್ಕಾಗಿ ಸಾಂವಿದಾನಿಕ ತಿದ್ದುಪಡಿ ತರಬೇಕಾದ ಅಗತ್ಯವೂ ಇದೆ. ಇದಕ್ಕಾಗಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ವರದಿಯಲ್ಲಿ  ಹಲವು  ಮಾರ್ಗಸೂಚಿಗಳನ್ನು ಒದಗಿಸಲಾಗಿದೆ.

ಅನೇಕ ರಾಜ್ಯಗಳಲ್ಲಿ ವಿಭಿನ್ನ ಸಮಯಗಳಲ್ಲಿ ವಿಧಾನಸಭಾ ಚುನಾವಣೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿರು ವುದರಿಂದಾಗಿ ಅವುಗಳನ್ನು ಇನ್ನು ಲೋಕಸಭಾ ಚುನಾವಣೆಯ ಜೊತೆಗೆ ನಡೆಸಲು ಕೆಲವು ರಾಜ್ಯಗಳಲ್ಲಿ ಮುಂಚಿತವಾಗಿ ಚುನಾವಣೆ ನಡೆಸಬೇಕಾದಲ್ಲಿ ಕೆಲವು ರಾಜ್ಯಗಳಲ್ಲಿ ಮುಂಚಿತವಾಗಿ ಚುನಾವಣೆ ನಡೆಸಬೇಕಾಗಿ ಬರಲಿದೆ.  ಅದೇ ಸಮಯದಲ್ಲಿ ಕೆಲವು ರಾಜ್ಯಗಳ ಸರಕಾರದ ಆಡಳಿತ ಅವಧಿಯನ್ನು ವಿಸ್ತರಿಸಬೇಕಾಗಿಯೂ ಬರಲಿದೆ. ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ರಚಿಸಲಾದ ಸಮಿತಿ ಹಲವು ಬಾರಿ ವಿಶೇಷ ಠಿಕಾಣಿ ಹೂಡಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ  ಚರ್ಚೆ ನಡೆಸಿ ಅವರ ವಾದಗಳನ್ನು ಆಲಿಸಿತ್ತು. ಇದಕ್ಕೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಬೆಂಬಲ ನೀಡಿದರೆ, ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ, ಟಿಎಂಸಿ ವಿರೋಧ ವ್ಯಕ್ತಪಡಿಸಿವೆ.

ರಾಷ್ಟ್ರಪತಿಗೆ ಸಲ್ಲಿಸಲಾಗುವ ವರದಿಯಲ್ಲಿ ಚುನಾವಣಾ  ಆಯೋಗ, ಕಾನೂನು ಆಯೋಗ ಮತ್ತು ಕಾನೂನು ತಜ್ಞರ ಅಭಿಪ್ರಾಯಗಳೂ ಒಳಗೊಂಡಿವೆ.

ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ  ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವುದು ಒಳ್ಳೆಯದು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.  ಇದು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿ ಸಲು ಸಹಾಯಕವಾಗ ಲಿದೆಯೆಂದು ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page