ಒಂದು ವಾರದ ಹಿಂದೆ ನಾಪತ್ತೆಯಾಗಿ ಪತ್ತೆಯಾದ ಯುವತಿ ಮತ್ತೆ ನಾಪತ್ತೆ ಕುಂಬಳೆ ಪೊಲೀಸರಿಂದ ತೀವ್ರ ತನಿಖೆ
ಕುಂಬಳೆ: ಒಂದು ವಾರದ ಹಿಂದೆ ನಾಪತ್ತೆಯಾಗಿ ಕರ್ನಾಟಕ ದಿಂದ ಪತ್ತೆಹಚ್ಚಿದ ಯುವತಿ ಮತ್ತೆ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಬಂದ್ಯೋಡಿನ ೨೧ರ ಹರೆಯದ ಯುವತಿ ನಿನ್ನೆ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ನಾಪತ್ತೆಯಾಗಿ ದ್ದಾಳೆ. ತಾಯಿ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಒಂದು ವಾರದ ಹಿಂದೆ ಈ ಯುವತಿ ನಾಪತ್ತೆಯಾ ಗಿದ್ದಳೆಂದು ಹೇಳಲಾಗು ತ್ತಿದೆ. ಆ ವೇಳೆ ನಡೆಸಿದ ತನಿಖೆ ಯಲ್ಲಿ ಕರ್ನಾಟಕ ದಿಂದ ಯುವತಿ ಯನ್ನು ಪತ್ತೆಹಚ್ಚಲಾಗಿತ್ತು. ಈಗ ಮತ್ತೆ ನಾಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.