ಓಣಂ ಕೊಡುಗೆಯಾಗಿ ಕೇರಳಕ್ಕೆ ಎರಡನೇ ‘ವಂದೇ ಭಾರತ್ ಎಕ್ಸ್‌ಪ್ರೆಸ್’

ಕಾಸರಗೋಡು: ಓಣಂ ಹಬ್ಬದ ಕೊಡುಗೆಯಾಗಿ  ಕೇರಳದಲ್ಲಿ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲು  ಭಾರತೀಯ ರೈಲ್ವೇ ಇಲಾಖೆ ತೀರ್ಮಾನಿಸಿದೆ. ಆದರೆ  ರೈಲು ಸೇವೆಯನ್ನು ಆರಂಭಿಸುವ ದಿನಾಂಕವನ್ನು ರೈಲ್ವೇ ಇಲಾಖೆ ಇನ್ನೂ ಪ್ರಕಟಿಸಿಲ್ಲ. ಓಣಂ ಹಬ್ಬದ ವೇಳೆಯಲ್ಲೇ ಈ ರೈಲು ಸೇವೆ ಆರಂಭಿಸುವ ಸಾಧ್ಯತೆ ಇದೆ. ಹಾಗೆ ನಡೆದಲ್ಲಿ  ಅದು ರೈಲ್ವೇ ಇಲಾಖೆ ಕೇರಳಕ್ಕೆ ನೀಡಲಿರುವ ಅನಿರೀಕ್ಷಿತ ಓಣಂ ಕೊಡುಗೆಯಾಗಲಿದೆ. ದ್ವಿತೀಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಾಡಿಯ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದ್ದು, ಸೇವೆ ಆರಂಭಿಸುವ ಪೂರ್ವಭಾ ವಿಯಾಗಿ ಇಂಜಿನಿಯರ್‌ಗಳು ಹಾಗೂ ಲೋಕೋ ಪೈಲೆಟ್‌ಗಳು ಅದರ ಪರಿಶೀಲನೆ ಆರಂಭಿಸಿದ್ದಾರೆ. ಮಾತ್ರವಲ್ಲ ಮಂಗಳೂರಿನಲ್ಲಿ ಫಿಟ್ ಲೈನನ್ನು ಸಜ್ಜೀಕರಿಸಲಾಗಿದೆ.

 ಯಾಕೆಂದರೆ ಈ ಎರಡನೇ ವಂದೇ ಭಾರತ್ ರೈಲು ಸೇವೆಯನ್ನು ಕಾಸರಗೋಡಿನ ಬದಲು  ಮಂಗಳೂರಿನಿಂದ ಸೇವೆ ಆರಂಭಿಸಲು ರೈಲ್ವೇ ಇಲಾಖೆ ಉದ್ದೇಶಿಸಿದವೆನ್ನಲಾಗಿದೆ. ಅದರಂತೆ ಈ ರೈಲು ಸೇವೆಗಾಗಿ ಮಂಗಳೂರಿನಲ್ಲಿ ವಿದ್ಯುತ್ ಲೈನ್‌ಗಳನ್ನು ಎಳದು ಫಿಟ್ ಲೈನನ ಈಗಲೇ ಸಜ್ಜೀಕರಿಸ ಲಾಗಿದೆ. ಮಂಗಳೂರಿನಲ್ಲಿ ಮೂರು ಫಿಟ್ ಲೈನ್ ಗಳಿದ್ದು ಅದರ ದುರಸ್ತಿ ಕೆಲಸಗಳೂ ಈಗ ನಡೆಯುತ್ತಿವೆ. ಮಂಗಳೂರಿನಲ್ಲಿ ೧೧೦೦೦/೭೫೦ ವೋಲ್ಟೇಜ್‌ನ ವಿದ್ಯುತ್ ಸಬ್ ಸ್ಟೇಶನ್ ಕೂಡಾ ಇದೆ. ಅದರ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮವನ್ನೂ ನಡೆಸಲಾಗುತ್ತಿದೆ. ಇದರಿಂದಾಗಿ ದ್ವಿತೀಯ ವಂದೇ ಭಾರತ್  ಎಕ್ಸ್‌ಪ್ರೆಸ್  ರೈಲು ಸೇವೆ ಕಾಸರಗೋಡಿನ ಬದಲು ಮಂಗಳೂರಿನಿಂದ ಕಾಸರ ಗೋಡು ಮೂಲಕ ತಿರುವನಂತಪುರಕ್ಕೆ ಸೇವೆ ನಡೆಸುವ ಸಾಧ್ಯತೆ ಇದೆ.  ಪ್ರಥಮ ವಂದೇ ಭಾರತ್ ಎಕ್ಸ್‌ಪ್ರೆಸ್ ಈಗ ಕಾಸರಗೋಡು-ತಿರುವನಂತಪುರ ತನಕ ಸೇವೆ ನಡೆಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page