ಓಣಂ ಹಬ್ಬಕಾಲದ ವೆಚ್ಚಗಳಿಗೆ ಹಣ ಹೊಂದಿಸಲು ಸರಕಾರಕ್ಕೆ ತಲೆಬಿಸಿ
ತಿರುವನಂತಪುರ: ೮ ಸಾವಿರ ಕೋಟಿ ರೂ. ಸರಕಾರಕ್ಕೆ ಓಣಂ ಹಬ್ದ ಕಾಲದಲ್ಲಿ ವೆಚ್ಚಕ್ಕೆ ಬೇಕಾಗಿ ಬರುವುದಾದರೂ ಸಾಲ ತೆಗೆಯುವ ಮೂಲಕ ಸಂಗ್ರಹಿಸಲು ಉದ್ದೇಶಿಸಿ ರುವುದು ೩ ಸಾವಿರ ಕೋಟಿ ರೂ. ಮಾತ್ರವಾಗಿದೆ. ಉಳಿದ ಮೊತ್ತವನ್ನು ಎಲ್ಲಿಂದ ಸಂಗ್ರಹಿಸುವುದು ಎಂಬುದರ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಈ ತಿಂಗಳ ೧೫ರಂದು ರಿಸರ್ವ್ ಬ್ಯಾಂಕ್ ಮೂಲಕ ಸಾಲ ತೆಗೆಯಲು ತೀರ್ಮಾನಿಸಲಾಗಿದೆ. ಉಳಿದ ಮೊತ್ತ ಸರಕಾರದ ತೆರಿಗೆ ಆದಾಯದಿಂದ, ತೆರಿಗೇತರ ಆದಾಯದಿಂದ ಸಂಗ್ರಹಿಸಲು ಉದ್ದೇಶಿಸಲಾಗಿದೆಯಾದರೂ, ಅದರಿಂದ ಅಷ್ಟು ಹಣ ಲಭಿಸದೆಂದು ವಿತ್ತ ಇಲಾಕೆ ಸೂಚನೆ ನೀಡಿದೆ.
ಟ್ರಷರಿಯಿಂದಿರುವ ಹಣ ವಿತರಣೆಗೆ ನಿಯಂತ್ರಣ ಏರ್ಪಡಿ ಸಿರುವುದರಿಂದಾಗಿ ಗರಿಷ್ಟ ಮೊತ್ತ ಉಳಿಕೆ ಮಾಡಬಹುದಾದರೂ ೫೦೦೦ ಕೋಟಿ ಕಂಡು ಕೊಳ್ಳುವುದಕ್ಕೆ ಸಾಧ್ಯವಿಲ್ಲ. ವೆಚ್ಚ ಕಡಿತವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ.
ನೌಕರರಿಗೆ ಓಣಂ ಹಬ್ಬಕ್ಕೆ ೨೦,೦೦೦ ರೂ. ಮುಂಗಡವಾಗಿ ನೀಡುವುದನ್ನು ಹೊರತುಪಡಿಸಬೇಕೆಂದು ಶಿಫಾರಸು ವಿತ್ತ ಇಲಾಖೆ ನೀಡಿದೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನ ಉಂಟಾಗಲಿಲ್ಲ.