ಔತಣಕ್ಕೆ ಬಳಸುವ ತರಕಾರಿ ತೊಳೆದು ಶುಚೀಕರಿಸದಿದ್ದಲ್ಲಿ ಕಾನೂನುಕ್ರಮ

ಕಾಸರಗೋಡು: ಮದುವೆ ಇತ್ಯಾದಿ ಸಮಾರಂಭಗಳಿಗಾಗಿ ಏರ್ಪಡಿಸಲಾಗುವ ಔತಣ ಅಥವಾ ಸತ್ಕಾರ ಕೂಟಗಳಿಗೆ ಉಪಯೋಗಿ ಸಲಾಗುವ ತರಕಾರಿ ಇತ್ಯಾದಿಗಳನ್ನು ಬಳಸುವ ಮೊದಲು ಅವುಗಳನ್ನು  ಚೆನ್ನಾಗಿ ತೊಳದು ಶುಚೀಕರಿಸಬೇಕು. ಇಲ್ಲದಿದ್ದಲ್ಲಿ ಇನ್ನು ಕಾನೂನು ಕ್ರಮಕೆಗೊಳ್ಳಲಾಗುವೆಂದು ರಾಜ್ಯ ಆಹಾರ ಮತ್ತು ಸುರಕ್ಷಾ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರಾಜ್ಯ ಮಾನವಹಕ್ಕು  ಹಂಗಾಮಿ ಅಧ್ಯಕ್ಷ  ನ್ಯಾಯಾಂಗ ಸದಸ್ಯರೂ ಆಗಿರುವ ಕೆ. ಬೈಜುನಾಥ್ ಅವರು ಈ ಆದೇಶ ಹೊರಡಿಸಿದ್ದಾರೆ. ಔತಣ ಕೂಟಗಳಿಗೆ ಬಳಸಲಾ ಗುವ ತರಕಾರಿ ಇತ್ಯಾದಿಗಳನ್ನು  ಶುಚೀಕರಿಸದೆ  ಉಪಯೋಗಿಸುವ ಬಗ್ಗೆ ಮಾನವಹಕ್ಕು ಆಯೋಗಕ್ಕೆ ದೂರು ಲಭಿಸಿತ್ತು. ಅದನ್ನು ಪರಿಶೀ ಲಿಸಿದ ಆಯೋಗ ಬಳಿಕ ಆಹಾರ ಸುರಕ್ಷಾ ಆಯುಕ್ತರಿಗೆ ಈ ನಿರ್ದೇಶ ನೀಡಿದೆ.

ಹಣ್ಣು-ಹಂಪಲು ಮತ್ತು ತರ ಕಾರಿ ಇತ್ಯಾದಿ ಆಹಾರ ಸಾಮಗ್ರಿಗ ಳಲ್ಲಿ ಕೆಲವರು ಕಲಬೆರಕೆಗೊಳಿಸುತ್ತಿ ರುವುದಾಗಿ  ಡಾ. ಸುರೇಶ್ ಕೆ ಗುಪ್ತ ಎಂಬವರು ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಅದಕ್ಕೆ ಹೊಂದಿಕೊಂಡು ಆಯೋಗ ಈ ನಿರ್ದೇಶ ನೀಡಿದೆ.

Leave a Reply

Your email address will not be published. Required fields are marked *

You cannot copy content of this page