ಕಂಚಿಕಟ್ಟೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮ: ಕಾಮಗಾರಿ ಶೀಘ್ರ ಆರಂಭ
ಕುಂಬಳೆ: ಕಂಚಿಕಟ್ಟೆಯಲ್ಲಿ ಅಪಾಯ ಕಾರಿಯಾದ ವಿಸಿಬಿ ಕಂ ಬ್ರಿಡ್ಜ್ ಮುರಿದು ತೆಗೆದು ಅಲ್ಲಿ ಹೊಸ ಸೇತುವೆ ನಿರ್ಮಾ ಣಕ್ಕೆ ನಿರ್ಧರಿಸಲಾ ಗಿದೆ. 7.5 ಮೀಟರ್ ಅಗಲದಲ್ಲಿ ಕಾಲು ದಾರಿಯನ್ನು ಒಳ ಗೊಂಡು ನಿರ್ಮಿಸುವ ಸೇತುವೆಯ ಡಿಸೈನ್ ತಯಾರಿಸಿ ಐಬಿಆರ್‌ಬಿ ನೀಡಿರುತ್ತದೆ. ತಿರುವನಂತ ಪುರದಲ್ಲಿ ನೀರಾವರಿ ಖಾತೆ ಸಚಿವ ರೋಶಿ ಅಗಸ್ಟಿನ್‌ನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನೂತನ ಸೇತುವೆ ಯ ನಿರ್ಮಾಣ ಶೀಘ್ರ ಆರಂಭಿಸುವಂತೆ ಸಂಬಂಧಪಟ್ಟ ವರಿಗೆ ಸಚಿವರು ನಿರ್ದೇಶ ನೀಡಿದ್ದಾರೆ. ಮಳೆಗಾಲದಲ್ಲಿ ಸಂಭವಿ ಸುವ ಹೈ ಫ್ಲಡ್ ಲೆವೆಲ್‌ನ್ನು ಪರಿಗಣಿಸಿ ಪೂರ್ತಿಗೊಳಿಸಿದ ಡಿಸೈನ್ ಪ್ರಕಾರ ಪ್ರಸ್ತುತವುಳ್ಳ ಸೇತುವೆ ಯಿಂದ 2 ಮೀಟರ್ ಎತ್ತರ ಹೆಚ್ಚಿಸಿ ನಿರ್ಮಿಸಲು ಎರಡೂ ಬದಿಗಳಿಂದಾಗಿ 30 ಸೆಂಟ್ಸ್ ಸ್ಥಳವನ್ನು ಹೆಚ್ಚುವರಿಯಾಗಿ ಪಡೆದುಕೊ ಳ್ಳುವುದು ಕಷ್ಟಸಾಧ್ಯವೆಂದು ಅಧಿಕಾರಿ ಗಳು ಸಭೆಯಲ್ಲಿ ತಿಳಿಸಿರುತ್ತಾರೆ. ಆದ್ದರಿಂದ ಸೇತುವೆಯ ಎತ್ತರ ಕಡಿಮೆ ಗೊಳಿಸಲು ರೀ ಡಿಸೈನ್ ಚಟುವಟಿ ಕೆಗಳನ್ನು ಐಬಿಆರ್ ಡಿಯಲ್ಲಿ ನಡೆಯುತ್ತಿದೆ. ಈಗಿರುವ ಸೇತುವೆಗಿಂತ ಒಂದು ಮೀಟರ್ ಎತ್ತರದಲ್ಲಿ ಹೊಸ ಸೇತುವೆ ನಿರ್ಮಿಸುವುದರಿಂದ ಪಡೆದುಕೊಳ್ಳಬೇ ಕಾದ ಭೂಮಿಯ ಪ್ರಮಾಣ 10 ಸೆಂಟ್‌ಗೆ ಕಡಿಮೆಗೊ ಳಿಸಲು ಸಾಧ್ಯವಿದೆ ಯೆಂದು ಸಂಬಂ ಧಪಟ್ಟವರು ಸಭೆಯಲ್ಲಿ ತಿಳಿಸಿದರು. ಭೂಮಿಯ ಅಳತೆ ನಿಗದಿ ಪಡಿಸಲು ತಾಲೂಕು ಸರ್ವೇಯರ್ ಸರ್ವೇ ಕ್ರಮಗಳನ್ನು ಆರಂಭಿಸಿದ್ದಾರೆ. ಭೂಮಿಯ ನಕ್ಷೆ ತಯಾರಿಸಲು ಐಡಿಆರ್‌ಬಿಯಿಂದ ಬ್ರಿಡ್ಜಿಂಗ್ ಬೇಸಿಗ್ ಬ್ರಾಯಿಂಗ್ ಲಭಿಸಿರುತ್ತದೆ. ೨೫ ಕೋಟಿ ರೂ. ಖರ್ಚು ಅಂದಾಜಿಸುವ ಈ ಯೋಜನೆ ಈ ವರ್ಷ ಆಗೋಸ್ತ್ ತಿಂಗ ಳೊಳಗೆ ಡಿಪಿಆರ್ ಪೂರ್ತಿಗೊ ಳಿಸಲು ಸಾಧ್ಯವಿದೆಯೆಂದು ನಿರೀಕಿಸಿರುವುದಾಗಿ ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಹೊಸ ಸೇತುವೆಗೆ ಅಗತ್ಯವುಳ್ಳ ಭೂಮಿ ಪಡೆದುಕೊಳ್ಳಲು ಬೇಕಾಗಿ ಬರುವ ಫಂಡ್ ಸಂಗ್ರಹಿಸಲು ಹಾಗೂ ಇತರ ಕ್ರಮಗಳಿಗೆ ಶಾಸಕ ಎಕೆಎಂ ಅಶ್ರಫ್‌ರ ನೇತೃತ್ವದಲ್ಲಿ ಜನಪರ ಸಮಿತಿ ರೂಪೀಕರಿಸಲಾಗಿದೆ. ವಿಧಾನಸಭಾ ಸಮುಚ್ಛಯದಲ್ಲಿ ಸೇರಿದ ಉನ್ನತ ಮಟ್ಟದ ಸಭೆಯಲ್ಲಿ ಶಾಸಕ ಎಕೆಎಂ ಅಶ್ರಫ್ ಇರಿಗೇಶನ್ ಆಂಡ್ ಎಡ್ಮಿನಿಸ್ಟ್ರೇಶನ್ ಚೀಫ್ ಇಂಜಿನಿಯರ್ ಎಂ. ಸದಾಶಿ ವನ್, ಐಡಿಆರ್‌ಬಿ ಡಿಸೈನ್ ವಿಂಗ್ ಡೈರೆಕ್ಟರ್ ಶ್ರೀದೇವಿ ಪಿ, ಮೈನರ್ ಇರಿಗೇಶನ್ ಕಲ್ಲಿಕೋಟೆ ಸರ್ಕಲ್ ಸುಪ್ರೆಂ ಡಿಂಗ್ ಇಂಜಿನಿಯರ್ ರಮೇಶನ್, ಮೈನರ್ ಇರಿಗೇಶನ್ ಡಿವಿಶನ್ ಎಕ್ಸಿಕ್ಯೂಟಿವ್ ಇಂಜಿನಿ ಯರ್ ಸಂಜೀವ್ ಪಿ. ಮೈನರ್ ಇರಿಗೇ ಶನ್ ಮಂಜೇಶ್ವರ ಸಬ್ ಡಿವಿಶನ್ ಅಸಿ. ಎಕ್ಸಿಕ್ಯೂಟಿವ್ ಇಂಜಿನಿ ಯರ್ ಅನೂಪ್ ಎ, ಡಿಸೈನ್ ವಿಂಗ್ ಅಸಿ. ಎಕ್ಸಿಕ್ಯೂಟಿವ್ ಇಂಜಿನಿ ಯರ್ ಸೀನ, ಜೋಯಿಂಟ್ ಡೈರೆಕ್ಟರ್ ಡಿಸೈನ್ ಸಿಂಧು ಆರ್, ಕುಂಬಳೆ ಡಿವಿಶನ್ ಮೈನರ್ ಇರಿಗೇಶನ್ ಅಸಿ ಇಂಜಿನಿ ಯರ್ ಗೋಕುಲನ್ ಟಿ, ಶಾಸಕರ ಪರ್ಸ ನಲ್ ಅಸಿಸ್ಟೆಂಟ್ ಅಶ್ರಫ್ ಕೊಡ್ಯಮ್ಮೆ ಮೊದಲಾದವರು ಉಪಸ್ಥಿತರಿದ್ದರು.