ಕಟ್ಟಡ ನಿರ್ಮಾಣಕ್ಕೆ ಗುಡ್ಡೆ ಕೊರೆತ: ಮಂದಿರ ಸಹಿತ 13 ಮನೆಗಳು ಕುಸಿಯುವ ಭೀತಿಯಲ್ಲಿ
ಕಾಸರಗೋಡು: ಬಹುಮಹಡಿ ಕಟ್ಟಡ ನಿರ್ಮಿಸಲು ಗುಡ್ಡೆಯನ್ನು ಕೊರೆದ ಹಿನ್ನೆಲೆಯಲ್ಲಿ ಮಂದಿರ ಸಹಿತ ಒಂದು ಊರೇ ಅಪಾಯ ಭೀತಿಯಲ್ಲಿ ದಿನಕಳೆಯು ವಂತಾಗಿದೆ. ನಗರದ ಅಮೈಯಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ಹಾಗೂ ಅಲ್ಲಿಗೆ ತೆರಳುವ ಕಾಂಗ್ರೀಟ್ ರಸ್ತೆ, ಕುಡಿಯುವ ನೀರಿನ ಟ್ಯಾಂಕ್ ಎಂಬಿವರು ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿಯಿದೆ. ಮಣ್ಣು ತೆಗೆದ ಸ್ಥಳದಲ್ಲಿ ಯಾವುದೇ ಮುಂಜಾಗ್ರತೆ ವಹಿಸದಿರು ವುದೇ ಗುಡ್ಡೆ ಇನ್ನಷ್ಟು ಕುಸಿಯಲು ಕಾರಣವೆನ್ನಲಾಗಿದೆ. ಈಗಾಗಲೇ ಅಲ್ಪ ಮಟ್ಟದಲ್ಲಿ ಮಣ್ಣು ಕುಸಿದುಬೀಳುತ್ತಿದ್ದು, ಇದು ಸ್ಥಳೀಯರಲ್ಲಿ ಆತಂಕ ಮೂಡಲು ಕಾರಣವಾಗಿದೆ. ಈಗಿರು ವ ಭಜನಾ ಮಂದಿರದ ಸಮೀಪದ ವರೆಗೆ ಮಣ್ಣು ತೆಗೆಯಲಾಗಿದ್ದು, ಈ ಪರಿಸರದಲ್ಲಿ 13 ಮನೆಗಳು ಇವೆ. ಇಲ್ಲಿಗೆ ತೆರಳಲಿರುವ ರಸ್ತೆ ಕೂಡಾ ಕುಸಿಯುವ ಹಂತದಲ್ಲಿದ್ದು, ಈ ಮೂಲಕ ಸಂಚರಿಸಲು ಭೀತಿಯಿದೆ ಯೆಂದು ಇಲ್ಲಿಯವರು ತಿಳಿಸಿದ್ದಾರೆ.
ಮೀನು ಕಾರ್ಮಿಕೆ ನಿಧನ
ಉಪ್ಪಳ: ಇಲ್ಲಿ ಶಾರದಾ ನಗರ ನಿವಾಸಿ ಮೀನು ಕಾರ್ಮಿಕೆ ತಾರಾವತಿ (45) ನಿಧನ ಹೊಂದಿದರು. ದಿ| ದೊಡ್ಡಯ್ಯ-ದಿ| ಜಾನಕಿ ಪುತ್ರಿಯಾದ ಈಕೆ ಮೂಲತಃ ಬೈಕಂಪಾಡಿ ನಿವಾಸಿಯಾಗಿದ್ದು, ಶಾರದಾ ನಗರ ರಾಜೇಶ್ ಸಾಲಿಯಾನ್ರ ಪತ್ನಿಯಾಗಿ ದ್ದಾರೆ. ತಾಯಿ ಮನೆಯಲ್ಲಿ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಮೃತರು ಪತಿ, ಮಕ್ಕ ಳಾದ ಹಿತ, ನಂದನ್, ಸಹೋದರ ರೋಹಿ, ಸಹೋದರಿ ಯರಾದ ಸ್ವಪ್ನ, ಗಾಯತ್ರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.