ಕಣಿಪುರ ಕ್ಷೇತ್ರ ಬ್ರಹ್ಮಕಲಶೋತ್ಸವ: ಕುಂಬಳೆ ಪೇಟೆಯಲ್ಲಿ ಮೂಲಭೂತ ಸೌಕರ್ಯ ಶೀಘ್ರ ಏರ್ಪಡಿಸಲು ಬಿಜೆಪಿ ಆಗ್ರಹ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೆ ಹಿನ್ನೆಲೆಯಲ್ಲಿ ಕುಂಬಳೆ ಪೇಟೆಯಲ್ಲಿ ಮೂಲಭೂತ ಸೌಕರ್ಯ ತಕ್ಷಣ ಒದಗಿಸಬೇಕೆಂದು ಬಿಜೆಪಿ ಪಂ. ಸಮಿತಿ ಆಗ್ರಹಿಸಿದೆ.

ಬ್ರಹ್ಮಕಲಶೋತ್ಸವ, ಜಾತ್ರೆ ಹಿನ್ನೆಲೆಯಲ್ಲಿ ಇಲ್ಲಿಗೆ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಬೀದಿ ದೀಪ, ಚರಂಡಿ, ಪಾರ್ಕಿಂಗ್ ವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಬಿಜೆಪಿ ತಿಳಿಸಿದೆ. ಕುಂಬಳೆ ಪೇಟೆಯ ಐಎಚ್‌ಆರ್‌ಡಿ ಕಾಲೇಜಿನ ಹಳೆಯ ಕಟ್ಟಡದ ಸಮೀಪ ಇರುವ ಸಾರ್ವಜನಿಕ ಶೌಚಾಲಯ ಉಪಯೋಗಶೂನ್ಯವಾ ಗಿದ್ದು, ಇದನ್ನು ಸ್ವಚ್ಛಗೊಳಿಸಿ ಜನರಿಗೆ ಉಪಯೋಗಪ್ರದಗೊಳಿಸಬೇಕೆಂದು ಬಿಜೆಪಿ ಪಂಚಾಯತ್‌ನಲ್ಲಿ ಆಗ್ರಹಿಸಿದೆ. ಪೇಟೆಯಲ್ಲಿ ಸ್ಥಾಪಿಸಿದ ಬೀದಿ ದೀಪಗಳನ್ನು ಶೀಘ್ರ ಉದ್ಘಾಟಿಸ ಬೇಕೆಂದೂ ಒತ್ತಾಯಿಸಿದೆ. ಉತ್ಸವ ಸಮಯದಲ್ಲಿ ಪಂಚಾಯತ್ ಸಂತೆ ವ್ಯಾಪಾರಕ್ಕೆ ಸ್ಥಳ ನೀಡಿದ್ದು, ಇದರಿಂದ ಲಭಿಸುವ  ಹಣವನ್ನು ಪೇಟೆಯ ಮೂಲಸೌಕಾರ್ಯಕ್ಕೆ ಉಪಯೋಗಿ ಬೇಕೆಂದು ಬಿಜೆಪಿ ಆಗ್ರಹಿಸಿದೆ. ಉತ್ಸವ ಸಮಯದಲ್ಲಿ ರಸ್ತೆ ಬದಿಯ ಮೀನು ವ್ಯಾಪಾರವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದೂ ಬಿಜೆಪಿ ಪಂ. ಸಮಿತಿ ಒತ್ತಾಯಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್, ಮಂಡಲ ಉಪಾಧ್ಯಕ್ಷರಾದ ಪ್ರೇಮಲತಾ, ಎಸ್. ರಮೇಶ್ ಭಟ್, ಮಂಡಲ ಕಾರ್ಯದರ್ಶಿ ಸುಧಾಕರ ಕಾಮತ್, ಪಂ. ಸಮಿತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ಕುಮಾರ್, ವಿವೇಕಾನಂದ ಶೆಟ್ಟಿ, ಶಶಿ ಕುಮಾರ್, ಗೋಪಾಲ, ಪಂ. ಸದಸ್ಯರಾದ ಮೋಹನ ಕೆ., ಸುಲೋಚನ, ಶೋಭಾ ಎಸ್., ಪುಷ್ಪಲತಾ, ಕಾಜೂರ್, ವಿದ್ಯಾ ಎನ್. ಪೈ, ಪ್ರೇಮಾವತಿ, ಅಜಯ್ ಕುಮಾರ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page