ಕಣಿಪುರ: ನಾಳೆ ಸಂಜೆ ಮಾತೃ ಸಂಗಮ; ಸಾಧ್ವಿ ಶ್ರೀ ಮಾತಾನಂದಮಯಿಯವರಿಂದ ಆಶೀರ್ವಚನ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ  ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ಇಂದು ಬೆಳಿಗ್ಗೆ ಗಣಪತಿಹೋಮ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿತು. ಒಳ ವೇದಿಕೆಯಲ್ಲಿ ವಿವಿಧ ಭಜನಾ ಸಂಘಗಳಿಂದ ಭಜನಾ ಝೇಂಕಾರ್ ನಡೆಯುತ್ತಿದೆ. ಹೊರ ವೇದಿಕೆಯಲ್ಲಿ ಮಧ್ಯಾಹ್ನ ೧೨ರಿಂದ  ಜಗದೀಶ ಆಚಾರ್ಯ ಪುತ್ತೂರು ಅವರಿಂದ ಸಂಗೀತಗಾನ ಸಂಭ್ರಮ,  ಸಂಜೆ ೬ರಿಂದ ಗೋ.ನಾ. ಸ್ವಾಮಿ ಮತ್ತು ಬಳಗ ಬೆಂಗಳೂರು ಇವರಿಂದ ಜಾನಪದ- ಭಾವ-ಭಕ್ತಿಗೀತೆಗಳು, ರಾತ್ರಿ ೮.೩೦ರಿಂದ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ನಾಳೆ ಬೆಳಿಗ್ಗೆ  ೬ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಒಳ ವೇದಿಕೆಯಲ್ಲಿ ಬೆಳಿಗ್ಗೆ ೭ರಿಂದ ವಿವಿಧ ಭಜನಾ ಸಂಘಗಳಿಂದ ಭಜನಾ ಝೇಂಕಾರ್, ೧೦ರಿಂದ ರಾಧಾ ಮುರಳೀಧರ ಕಾಸರಗೋಡು ಅವರಿಂದ ಶಾಸ್ತ್ರೀಯ ಸಂಗೀತ, ೧೧.೩೦ರಿಂದ ದೇವಕಿತನಯ ಕೂಡ್ಲು ಅವರಿಂದ ಹರಿಕಥಾ ಸತ್ಸಂಗ, ಹೊರವೇದಿಕೆಯಲ್ಲಿ ಬೆಳಿಗ್ಗೆ ೧೦ರಿಂದ ಭವ್ಯಶ್ರೀ ಬಾಡೂರು ಇವರ ಶಿಷ್ಯೆಯರಿಂದ ಭರತನಾ ಟ್ಯೋತ್ಸವ, ೧೧.೩೦ರಿಂದ ಸಂಗೀತ ಬಾಲಚಂದ್ರ ಉಡುಪಿ ಬಳಗದಿಂದ ಸಂಗೀತ ಸೌರಭ, ಮಧ್ಯಾಹ್ನ ೧.೩೦ರಿಂದ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಅವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ೭.೩೦ಕ್ಕೆ ಚೀರುಂಬ ಭಗವತೀ ಮಹಿಳಾ ತಂಡದಿಂದ ತಿರುವಾದಿರ, ೮ಕ್ಕೆ ಡಾ| ವಿಜಯ ಕುಮಾರ್ ಪಾಟೀಲ್ ಧಾರವಾಡ ತಂಡದಿಂದ ಹಿಂದೂಸ್ತಾನಿ ಸಂಗೀತ ಹಾಗೂ ದಾಸವಾಣಿ,  ೧೦ರಿಂದ ಚೀರುಂಬ ಭಗವತಿ ಮಹಿಳಾ ತಂಡ ನಾರಾಯಣಮಂಗಲ ಇವರಿಂದ ಕೈಕೊಟ್ಟುಕಳಿ ನಡೆಯಲಿದೆ.

ನಾಳೆ ಸಂಜೆ ೪ ಗಂಟೆಗೆ ಮಾತೃ ಸಂಗಮ ನಡೆಯಲಿದೆ. ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡುವರು.  ಡಾ| ಶಾಂಭವಿ ಕಿಶೋರ್ ಕುಮಾರ್ ಕುಂಬಳೆ ಅಧ್ಯಕ್ಷತೆ ವಹಿಸುವರು. ಹಿಂದೂ ಐಕ್ಯವೇದಿ ರಾಜ್ಯ ಅಧ್ಯಕ್ಷೆ ಕೆ.ಪಿ. ಶಶಿಕಲಾ ಟೀಚರ್ ಧಾರ್ಮಿಕ ಉಪನ್ಯಾಸ ನೀಡುವರು. ಗಣ್ಯರು ಸಹಿತ ಹಲವರು ಉಪಸ್ಥಿತರಿರುವರು.

Leave a Reply

Your email address will not be published. Required fields are marked *

You cannot copy content of this page