ಕಣ್ಣೂರಿನಲ್ಲಿ ೧.೨ ಕೋಟಿ ರೂಪಾಯಿ ಚಿನ್ನ ವಶ : ಇಬ್ಬರು ಕಾಸರಗೋಡು ನಿವಾಸಿಗಳ ಸಹಿತ ಮೂವರ ಸೆರೆ

ಕಣ್ಣೂರು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಾಸರಗೋಡು ನಿವಾಸಿಗಳ ಸಹಿತ ಮೂವರಿಂದ ಒಟ್ಟು ೧.೨ ಕೋಟಿ  ರೂಪಾಯಿಯ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಅಬುದಾಬಿಯಿಂದ ಏರ್ ಇಂಡಿಯ ಎಕ್ಸ್‌ಪ್ರೆಸ್‌ನಲ್ಲಿ ಬಂದ ಕಾಸರಗೋಡು ಉದುಮ ನಿವಾಸಿ ಅಲ್ ಅಮೀನ್, ಶಾರ್ಜಾದಿಂದ ಏರ್‌ಇಂಡಿಯ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದ ತಳಂಗರೆ ನಿವಾಸಿ ರಫೀಕ್, ಅಬುದಾಬಿಯಿಂದ ಬಂದ ಕಲ್ಲಿಕೋಟೆ ಕೊಡುವಳ್ಳಿ ನಿವಾಸಿ ಜಂಶಾದ್ ಎಂಬಿವರಿಂದ ಚಿನ್ನವನ್ನು ವಶಪಡಿಸಲಾಗಿದೆ. ಉದುಮ ನಿವಾಸಿ ಅಲ್ ಅಮೀನ್‌ನಿಂದ ೨೭,೫೨,೦೮೮ ರೂಪಾಯಿ ಮೌಲ್ಯದ ೪೫೪.೧೪ ಗ್ರಾಂ ಚಿನ್ನ, ತಳಂಗರೆಯ ರಫೀಕ್‌ನಿಂದ  ೧೪,೬೩,೪೯೦ ರೂಪಾಯಿ ಮೌಲ್ಯದ ೨೪೧ ಗ್ರಾಂ ಚಿನ್ನ, ಕೊಡುವಳ್ಳಿಯ ಜಂಶಾದ್‌ನಿಂದ ೬೦,೧೧,೫೨೦ ರೂಪಾಯಿ ಮೌಲ್ಯದ ೯೯೨ ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ. ಅಲ್ ಅಮೀನ್ ಚಿನ್ನವನ್ನು ಪೇಸ್ಟ್‌ರೂಪದಲ್ಲಾಗಿಸಿ ಜೀನ್ಸ್ ಪ್ಯಾಂಟ್ ನೊಳಗೆ, ರಫೀಕ್ ಚಿನ್ನವನ್ನು ಪೇಸ್ಟ್ ರೂಪದಲ್ಲಾಗಿಸಿ ಒಳ ಉಡುಪಿನೊಳಗೆ ಬಚ್ಚಿಟ್ಟು ತಂದಿದ್ದಾರೆ. ಅದೇ ರೀತಿ ಜಂಶಾದ್ ಚಿನ್ನವನ್ನು ನಾಲ್ಕು ಮಾತ್ರೆ  ರೂಪದಲ್ಲಾಗಿಸಿ ಶರೀರದೊಳಗೆ ಬಚ್ಚಿಟ್ಟು ತಂದಿದ್ದಾರೆನ್ನಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page