ಕಣ್ವತೀಥದಲ್ಲಿ ಸಮುದ್ರಪೂಜೆ
ಮಂಜೇಶ್ವರ: ಅಯೋಧ್ಯೆಯಲ್ಲಿ ಜನವರಿ ೨೨ರಂದು ರಾಮ ದೇವರ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಅಯೋ ಧ್ಯೆಯ ವಿಶ್ವಸ್ಥ ಮಂಡಳಿಯ ಟ್ರಸ್ಟಿಗಳಾದ ಉಡುಪಿ ಪೇಜಾವರ ಅಧೊಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಬೋವಿ ಸಮಾಜದ ಭಗವತೀ ಕ್ಷೇತ್ರದ ಕಾರ್ನವರು ಮತ್ತು ಮೊಗವೀರ ಬಂಧುಗಳು ಕಣ್ವ ತೀರ್ಥ ಸಮುದ್ರ ಕ್ಕೆ ಹಾಲೆರೆದು ಹಿಂಗರ ಹೂ ಸಮರ್ಪಿಸಿ ಸಮುದ್ರ ಪೂಜೆ ಮಾಡಿದರು ಈ ಸಂದರ್ಭದಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ಗೋಪಾಲ ಶೆಟ್ಟಿ ಅರಿಬೈಲು, ಸುಧಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ಭಟ್ ಪೆರಂಪಲ್ಲಿ, ಇಂದುಶೇಖರ್ ಭಟ್ ಉಡುಪಿ, ರಘು ರಾಮ್ ಆಚಾರ್ಯ ಉಡುಪಿ, ಸುಧಾಕರ ಅಡ್ಯಂತಾಯ ತಲಪಾಡಿ, ಲಕ್ಷ್ಮಣ, ಚಂದ್ರಶೇಖರ ಕಣ್ವ ತೀರ್ಥ, ಜ್ಯೋತಿ ಶೆಟ್ಟಿ ಮಂಜೇಶ್ವರ ಸಹಿತ ಹಲವರು ಭಾಗವಹಿಸಿದರು.