ಕಣ್ವತೀರ್ಥ ಮಠ: ಸುತ್ತುಪೌಳಿ, ಪ್ರಾಂಗಣ ಲೋಕಾರ್ಪಣೆ ೯ರಂದು

ತಲಪ್ಪಾಡಿ: ಇಲ್ಲಿನ ಕಣ್ವತೀರ್ಥ ಮಠದ ಸುತ್ತುಪೌಳಿ ಹಾಗೂ ಪ್ರಾಂಗಣದ ನವೀಕರಣೆ ಪೂರ್ಣಗೊಂಡಿದ್ದು, ಈ ತಿಂಗಳ ೯ರಂದು ಅದನ್ನು ಲೋಕಾರ್ಪಣೆಗೊಳಿಸಲಾಗುವುದು. ಇದರಂಗವಾಗಿ ೮ರಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗಮನ, ಬಳಿಕ ವಿವಿಧ ವೈದಿಕ ಕಾರ್ಯಕ್ರಮ, ೯ರಂದು ಬೆಳಿಗ್ಗೆ ಪಂಚಾಮೃತ  ಅಭಿಷೇಕ ಸಹಿತ ವಿವಿಧ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಅಯೋಧ್ಯೆಯಲ್ಲಿ ನಡೆಯುವ ರಾಮದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ  ಭಾಗವಹಿಸಲು ತೆರಳುವ ಸ್ವಾಮೀಜಿಯವರನ್ನು ಗೌರವಿಸಲಾಗುವುದು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page