ಕನ್ನಡ ಭವನದಲ್ಲಿ ಕನ್ನಡ ಸಂಸ್ಕೃತಿ ಉತ್ಸವ 10ರಂದು

ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ಮಾರ್ಚ್ 10ರಂದು ಬೆಳಗ್ಗೆ 10ರಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಹಕಾರದಲ್ಲಿ ಕೇರಳ-ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ ಜರುಗಲಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಧ್ಯಕ್ಷ ಎಂ.ಕೆ ಪ್ರಾಣೇಶ್ ಉದ್ಘಾಟಿಸುವರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಕನ್ನಡ ಭವನ ಮತ್ತ ಗ್ರಂಥಾಲಯದ ಸ್ಥಾಪಕಾಧ್ಯಕ್ಷ ವಾಮನ್ ರಾವ್ ಬೇಕಲ್, ಪಿ ವಿ ಪ್ರದೀಪ್ ಕುಮಾರ್, ಎ ಆರ್ ಸುಬ್ಬಯ್ಯಕಟ್ಟೆ, ವಿ ಬಿ ಕುಳಮರ್ವ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ವಿಶಾಲಾಕ್ಷ ಪುತ್ರಕಳ, ಸಾಹಿತಿ ಡಾ.ಕೊಳ್ಚಪ್ಪೆ ಗೋವಿಂದ ಭಟ್ ಭಾಗವಹಿಸÀÄವರು. ನಂತರ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ರೇಖಾ ರೋಹನ್ ಅವರ ಗರಿ ಬಿಚ್ಚಿದ ಭಾವ ಕೃತಿ ಬಿಡುಗಡೆಯಾಗಲಿದೆ.
ಈ ಸಂದರ್ಭದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರಿಗೆ ಕನ್ನಡ ಭವನದ ಗುರುನಮನದೊಂ ದಿಗೆ ರಾಷ್ಟçಕವಿ ಗೋವಿಂದ ಪೈ ರಾಷ್ಟçಪ್ರಶಸ್ತಿ, ಸಾಹಿತಿ ಬಿ ಸತ್ಯವತಿ ಭಟ್ ಕೊಳಚಪ್ಪು ಅವರಿಗೆ ನಾಡೋಜಾ ಡಾ. ಕಯ್ಯಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಥಾಬಿಂದು ಕನ್ನಡರತ್ನ ಪ್ರಶಸ್ತಿಯನ್ನು ಸಾಕ್ಷ ್ಯಚಿತ್ರ ನಿರ್ಮಾಪಕ ಈ ಆರ್ ವಿಶ್ವಕುಮಾರ್ ಸೋಮವಾರಪೇಟೆ ಹಾಗೂ ಲೇಖಕಿ ಡಾ. ಶೈಲಾ ಅವರಿಗೆ ನೀಡಲಾಗುವುದು. ಕನ್ನಡಭವನದ ರಾಜ್ಯಾಂತರ ಪ್ರಶಸ್ತಿ ಯಾದ ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನು ಡಾ. ಕೊಳ್ಚಪ್ಪೆ ಗೋವಿಂದ ಭಟ್, ವೆಂಕಟ್ ಭಟ್ ಎಡನೀರು, ವಿರಾಜ್ ಅಡೂರು, ಸೀತಾಲಕ್ಷಿö್ಮ ವರ್ಮ, ಶಾಂತಾ ಪುತ್ತೂರು, ಜಯಾನಂದ ಪೆರಾಜೆ, ಡಾ.ಎನ್ ನಾರಾಯಣ ಸ್ವಾಮಿ ಕೋಲಾರ, ಅಖಿಲೇಶ್ ನಗುಮುಗಂ, ಬಿ ಶಿವಕುಮಾರ್ ಕೋಲಾರ, ಲಿಖಿತ್ ಹೊನ್ನಾಪುರ, ಅಪೂರ್ವ ಕಾರಂತ್ ಪುತ್ತೂರು ಇವರಿಗೆ ಪ್ರದಾನ ಮಾಡಲಾಗುವುದು. ಕನ್ನಡ ಭವನದ ಸಮಾಜ ಸೇವಾರತ್ನ ಪ್ರಶಸ್ತಿಯನ್ನು ಕೆ ಎನ್ ವೆಂಕಟ್ರಮಣ ಹೊಳ್ಳ ಹಾಗೂ ಹೊನ್ನೂರು ಆಲಿ ವಿಜಯನಗರ ಅವರಿಗೆ ನೀಡಲಾಗುವುದು. ಬೇಕೂರು ಕನ್ನಟಿಪ್ಪಾರೆ ಸುಭಾಷಿಣಿಚಂದ್ರ ಮತ್ತು ರೇಖಾ ಸುದೇಶ್ ರಾವ್ ಅವರ ನೇತೃತ್ವ ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Leave a Reply

Your email address will not be published. Required fields are marked *

You cannot copy content of this page