ಕಯ್ಯಾರ್ ಗ್ರೀನ್ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ಗೆ ರಜತ ಸಂಭ್ರಮ: ವರ್ಷಪೂರ್ತಿ ಕಾರ್ಯಕ್ರಮಕ್ಕೆ ನಾಳೆ ಚಾಲನೆ
ಕುಂಬಳೆ: 25ನೇ ವರ್ಷಕ್ಕೆ ಕಾಲಿಡುತ್ತಿರುವ ಕಯ್ಯಾರ್ ಗ್ರೀನ್ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವರ್ಷ ಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಪದಾಧಿಕಾರಿ ಗಳು ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ನಾಳೆಯಿಂದ ಆರಂಭಗೊಳ್ಳುವ ಕಾರ್ಯಕ್ರಮಗಳು ಮುಂದಿನ ಜನವರಿ 26ರಂದು ಸಮಾಪ್ತಿಯಾಗಲಿದೆ.
ಈ ಮಧ್ಯೆ ದಫ್ ಮುಟ್ಟ್ ಸ್ಪರ್ಧೆ, ಎಐ ವಿದ್ಯಾರ್ಥಿ ಸಭೆ, ಯುವ ಸಬಲೀ ಕರಣ, ಮಹಿಳಾ ಸಬಲೀಕರಣ, ಸೈಬರ್ ತಂತ್ರಜ್ಞಾನ ಅರಿವು, ಮಾದಕ ವಸ್ತು ಜಾಗೃತಿ, ಈಜು ತರಬೇತಿ, ಅಗ್ನಿಶಾಮಕ ಮತ್ತು ರಕ್ಷಣಾ ಜಾಗೃತಿ, ಮದರಂಗಿ ಉತ್ಸವ, ರೈತರ ದಿನಾ ಚರಣೆ, ಆಹಾರ ಉತ್ಸವ, ಚೆಸ್ ಸ್ಪರ್ಧೆ ಮೊದಲಾದವುಗಳು ನಡೆಯಲಿದೆ.
ನಾಳೆ ಸಂಜೆ 6.30ಕ್ಕೆ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಂಘಟನಾ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಬೋಳಾರ್ ಅಧ್ಯಕ್ಷತೆ ವಹಿಸುವರು. ಸಂಚಾಲಕ ಝಡ್.ಎ. ಕಯ್ಯಾರ್ ನೇತೃತ್ವ ನೀಡುವರು. ಶಾಸಕರಾದ ಎಕೆಎಂ ಅಶ್ರಫ್, ಎನ್.ಎ. ನೆಲ್ಲಿಕುನ್ನು, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಫಾದರ್ ವಿಶಾಲ್ ಮೆಲ್ವಿಲ್ಲೆ ಮೋನಿಸ್, ಯು.ಕೆ. ಸೈಫುಲ್ಲ ತಂಙಳ್, ಪೂಕೋಯ ತಂಙಳ್, ಮಂಜೇಶ್ವರ ಬ್ಲೋಕ್ ಪಂ. ಉಪಾಧ್ಯಕ್ಷ ಮುಹಮ್ಮದ್ ಹನೀಫ್, ರಹ್ಮಾನ್ ಗೋಲ್ಡನ್, ಅಶ್ರಫ್ ಕಾರ್ಲೆ, ಸಿ.ಐ. ಕೆ.ಪಿ. ವಿನೋದ್ ಕುಮಾರ್, ಅಝೀಜ್ ಮರಿಕೆ, ರಝಾಕ್ ಚಿಪ್ಪಾರು ಭಾಗವಹಿಸುವರು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಅಬೂಬಕ್ಕರ್ ಬೋಳಾರ್, ಝಡ್.ಎ. ಕಯ್ಯಾರ್, ಹುಸೇನ್ ಕೆ.ಕೆನಗರ, ಸಿದ್ದಿಕ್ ಜೋಡುಕಲ್ಲು, ನೌಷಾದ್ ಪಟ್ಲ ಭಾಗವಹಿಸಿದರು.