ಕರುವನ್ನೂರು ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಕೋಟಿಗಟ್ಟಲೆ ರೂ.ಗಳ ವಂಚನಾ ಪ್ರಕರಣ: ಸಿಪಿಎಂ ನೇತಾರ ಸೆರೆ: ಇನ್ನೂ ಹಲವರು ಇ.ಡಿ ನಿಗಾದಲ್ಲಿ
ಕೊಚ್ಚಿ: ತೃಶೂರು ಕರುವನ್ನೂರು ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಕೋಟಿಗಟ್ಟಲೆ ರೂ.ಗಳ ವಂಚನೆ ಹಗರಣಕ್ಕೆ ಸಂಬಂಧಿಸಿ ಸಿಪಿಎಂ ನೇತಾರ, ವಡಕಾಂಚೇರಿ ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಆರ್. ಅರವಿಂ ದಾಕ್ಷನ್‌ರನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ) ಬಂಧಿಸಿದೆ. ಈ ಹಗರಣಕ್ಕೆ ಸಂಬಂಧಿಸಿ ಇ.ಡಿ ಮೊದಲು ಅವರನ್ನು ತಮ್ಮ ಕಚೇರಿಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಿತ್ತು. ಬಳಿಕ ಅವರನ್ನು ನಿನ್ನೆ ಅವರ ಮನೆಯಿಂದಲೇ ಇ.ಡಿ ಬಂಧಿಸಿದೆ. ನಂತರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಇದೇ ಹಗರಣಕ್ಕೆ ಸಂಬಂಧಿಸಿ ಕರುವನ್ನೂರು ಸಹಕಾರಿ ಬ್ಯಾಂಕ್‌ನ ಸೀನಿಯರ್ ಅಕೌಂಟೆಂಟ್ ಆಗಿದ್ದ ಸಿ.ಕೆ. ಜಿನ್ಸಿ ಯನ್ನೂ ಇ.ಡಿ ಬಂಧಿಸಿದೆ. ಇದರ ಹೊರತಾಗಿ ಬೇನಾಮಿ ಎಂದು ಆರೋಪಿಸಲಾಗುತ್ತಿರುವ ಪಿ. ಸುರೇಶ್ ಕುಮಾರ್ ಮತ್ತು ಪಿ.ಪಿ. ಕಿರಣ್ ಎಂಬವರನ್ನು ಇಡಿ ಈ ಹಿಂದೆ ಬಂಧಿಸಿತ್ತು. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಈಗ ನಾಲ್ಕಕ್ಕೇರಿದೆ. ಮಾತ್ರವಲ್ಲ ಇನ್ನೂ ಹಲವರು ಇ.ಡಿಯ ತೀವ್ರ ನಿಗಾದಲ್ಲಿದ್ದಾರೆ.
ಈ ಸಹಕಾರಿ ಬ್ಯಾಂಕ್‌ನಲ್ಲಿ ಕೋಟಿಗಟ್ಟಲೆ ರೂ.ಗಳ ಆರ್ಥಿಕ ಅವ್ಯವಹಾರ ನಡೆದಿರುವುದಾಗಿ ಇ.ಡಿ ಅಧಿಕಾರಿಗಳು ಹೇಳಇದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ನೇತಾರ, ಮಾಜಿ ಸಚಿವ ಮೊಯ್ದೀನ್‌ರ ಹೇಳಿಕೆಯನ್ನು ಇ.ಡಿ ಈಗಾಗಲೇ ದಾಖಲಿಸಿಕೊಂಡಿದೆ.