ಕರ್ತವ್ಯ ವೇಳೆ ಫಾರೆಸ್ಟ್ ಗಾರ್ಡ್ ಕುಸಿದುಬಿದ್ದು ಮೃತ್ಯು
ಅಡೂರು: ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಕರ್ತವ್ಯ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ದೇಲಂಪಾಡಿ ಮುದಿಯಾರು ನಿವಾಸಿ ಸದಾಶಿವ ಗೌಡ (55) ಮೃತಪಟ್ಟ ವ್ಯಕ್ತಿ. ಜಾಲ್ಸೂರು ಫಾರೆಸ್ಟ್ ಚೆಕ್ಪೋ ಸ್ಟ್ನಲ್ಲಿ ಇವರು ಕರ್ತವ್ಯದಲ್ಲಿದ್ದ ವೇಳೆ ನಿನ್ನೆ ಮುಂಜಾನೆ ಕುಸಿದು ಬಿದ್ದಿದ್ದರು. ಕೂಡಲೇ ಸುಳ್ಯದ ಆಸ್ಪತ್ರೆಗೆ ತಲುಪಿ ಸಲಾಗಿತ್ತು. ಅನಂತರ ಮಂಗಳೂರಿನ ಆಸ್ಪತ್ರೆಗೆ ಕರೆದೊ ಯ್ಯುತ್ತಿದ್ದಂತೆ ಸಾವು ಸಂಭವಿಸಿದೆ. ಇವರು ಕಳೆದ ೭ ವರ್ಷಗಳಿಂದ ಜಾಲ್ಸೂರಿನಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಯಶೋಧ, ಪುತ್ರ ಹಿತೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.