ಕರ್ನಾಟಕ ಮದ್ಯದೊಂದಿಗೆ ಓರ್ವ ಸೆರೆ, ಬೈಕ್ ವಶ

 ಮಂಜೇಶ್ವರ: ಬಾಯಾರು ಗ್ರಾಮದ ಧರ್ಮತ್ತಡ್ಕದಲ್ಲಿ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ ನ ಪ್ರಿವೆಂಟೀವ್ ಆಫೀಸರ್ ಜೇಮ್ಸ್ ಅಬ್ರಹಾಂ ಕುರಿಯಾ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ  ೧೨.೯೬ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ.

ಈ ಸಂಬಂಧ ಧರ್ಮತ್ತಡ್ಕದ ಶಿವಪ್ರಸಾದ್ ವಿ (೪೧) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸ ಲಾಗಿದೆ. ಮಾಲು ಸಾಗಿಸಲು ಬಳಸಲಾದ ಬೈಕ್ ವಶಕ್ಕೆತೆಗೆದು ಕೊಳ್ಳಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿದ ಮಾಲುಗಳನ್ನು ಬಳಿಕ ಕುಂಬಳೆ ಅಬಕಾರಿ ರೇಂಜ್‌ಗೆ ಹಸ್ತಾಂತರಿಸಲಾಗಿದೆ.

ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ  ಅಬಕಾರಿ ಪ್ರಿವೆಂಟಿವ್ ಆಫೀಸರ್  ಮುರಳಿ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅಜಿತ್, ಪ್ರಜಿತ್ ಕೆ.ಆರ್, ನಸರುದ್ದೀನ್  ಎ.ಕೆ, ಶಿಜಿತ್ ವಿ.ವಿ, ಪ್ರಿಶಿ ಪಿ.ಎಸ್, ಚಾಲಕ ಕೃಷ್ಟಿನ್ ಎಂಬಿವರು ಒಗೊಂಡಿದ್ದರು.

ಸುಜಿತಾ ಕೊಲೆ ಕಾಂಗ್ರೆಸ್ ಮಂಡಲ ಕಾರ್ಯದರ್ಶಿ ಸೆರೆ

ತುವೂರ್: ಮಲಪ್ಪುರಂ ಜಿಲ್ಲೆಯ ತುವೂರ್‌ನಲ್ಲಿ ನಡೆಸಿದ ಕೊಲೆ ಪ್ರಕರಣದ ಹಿಂದೆ ಆರ್ಥಿಕ ಕಾರಣಗಳೆಂದು ಪೊಲೀಸ್ ವಶದಲ್ಲಿರುವ ಆರೋಪಿ ವಿಷ್ಣು ಹೇಳಿಕೆ ನೀಡಿದ್ದಾನೆ. ಕುಟುಂಬಶ್ರೀ ಕಾರ್ಯಕರ್ತೆ, ಕೃಷಿಭವನದಲ್ಲಿ ತಾತ್ಕಾಲಿಕ ನೌಕರೆಯಾಗಿದ್ದ ಸುಜಿತ ಹಾಗೂ ಪಂ.ನ ತಾತ್ಕಾಲಿಕ ನೌಕರನಾಗಿರುವ ವಿಷ್ಣು ಪರಿಚಯಸ್ಥರಾಗಿದ್ದರು. ಸುಜಿತರ ಆಭರಣವನ್ನು ಅಪಹರಿಸಲು ಕೊಲೆ ನಡೆಸಿರಬೇಕೆಂದು ಹೇಳಲಾಗುತ್ತಿದೆ. ಸುಜಿತಳ ನಾಪತ್ತೆಯ ಮುಂಚೆಯೇ ವಿಷ್ಣು ಕೆಲಸ ಉಪೇಕ್ಷಿಸಿದ್ದನೆನ್ನ ಲಾಗಿದೆ. ಯೂತ್ ಕಾಂಗ್ರೆಸ್ ಮಂಡಲ ಕಾರ್ಯದರ್ಶಿ ಯಾಗಿದ್ದಾನೆ ವಿಷ್ಣು.

ಈ ತಿಂಗಳ ೧೧ರಂದು ಸುಜಿತಾಳ ಪತ್ತೆಗಾಗಿ ತನಿಖೆ ನಡೆಸುವಾಗ ಈ ಬಗ್ಗೆ ಎಫ್‌ಬಿಯಲ್ಲಿ ವಿಷ್ಣು ನಿರಂತರ ಮಾಹಿತಿ ಪೋಸ್ಟ್ ಮಾಡಿದ್ದನು. ಇದರಿಂದಾಗಿ ಶಂಕೆ ತೋರಿ ಆತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page