ಕರ್ನಾಟಕ ಮದ್ಯ ವಶ: ಓರ್ವ ಸೆರೆ
ಕಾಸರಗೋಡು: ಬೇಡಡ್ಕ ಕಲ್ಲಾಡಕುಟ್ಟಿಯ ಮನೆಯೊಂದಕ್ಕೆ ಬಂದಡ್ಕ ಅಬಕಾರಿ ರೇಂಜ್ ಕಚೇರಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಜೆ. ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೨೮.೮ ಲೀಟರ್ (೧೮೦ ಎಂ.ಎಲ್.ನ ೧೬೦ ಟೆಟ್ರಾ ಪ್ಯಾಕೇಟ್) ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಈ ಸಂಬಂಧ ಬೇಡಡ್ಕ ಕಲ್ಲಾಡಕುಟ್ಟಿಯ ಇಬ್ರಾಹಿಂ ಕೆ. (೫೨) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸ ಲಾಗಿದೆ. ಅಬಕಾರಿ ಕಾರ್ಯಾ ಚರಣೆಯಲ್ಲಿ ಎಕ್ಸೈಸ್ ಪ್ರಿವೆಂಟೀವ್ ಆಫೀಸರ್ಗಳಾದ ಮಹೇಶ್ ಕೆ, ಅಫ್ಸಲ್ ಕೆ., ಟಾಲ್ಸ್ ಜೋಸ್, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್ ಸರಿತ ಕೊವ್ವಲ್ ಎಂಬವರು ಒಳಗೊಂಡಿದ್ದರು.