ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಜೋಸೆಫ್ ಜೆ. ಅವರ ನೇತೃತ್ವದಲ್ಲಿ ಚೇನಕ್ಕೋಡಿನಲ್ಲಿ ನಿನ್ನೆ ನಡೆಸಲಾದ ಅಬಕಾರಿ ಕಾರ್ಯಾಚರಣೆಯಲ್ಲಿ ೧೮೦ ಎಂ.ಎಲ್ನ ೧೫ ಪ್ಯಾಕೆಟ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಧೂರು ಹಿದಾಯತ್ ನಗರ ಮಾಳಿಂಗ ನಿವಾಸಿ ವಿಶ್ವನಾಥ (೩೪) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಇತರ ಅಬಕಾರಿ ಸಿಬ್ಬಂದಿಗಳು ರಾಜೀವನ್, ಮುರಳಿ, ಸುಮೋದ್, ಧನ್ಯ ಮತ್ತು ಫಸೀಲಾ ಎಂಬವರು ಒಳಗೊಂಡಿದ್ದರು.