ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಮಂಜೇಶ್ವರ: ಮೀಂಜ ಬೇರಿಕೆ ತಲಕ್ಕಿ ಎಂಬಲ್ಲಿ ಕುಂಬಳೆ ಎಕ್ಸೈಸ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ಯಲ್ಲಿ 5.4 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಪೈವಳಿಕೆ ಬಾಯಿಕಟ್ಟೆಯ ರಾಜ ಕೆ (39) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅಖಿಲೇಶ್ ಎಂ.ಎಂ, ಜಿತಿನ್ ವಿ, ಸುರ್ಜಿತ್ ಕೆ ಮತ್ತು ಚಾಲಕ ಪ್ರವೀಣ್ ಎಂಬಿವರು ಒಳಗೊಂಡಿದ್ದರು.