ಕರ್ನಾಟಕ ಸರಕಾರವನ್ನು ಬುಡಮೇಲುಗೊಳಿಸಲು ಶತ್ರುಭೈರವಿ ಯಾಗ, ಮೃಗಬಲಿ ನಡೆಸಿರುವುದಾಗಿ ಡಿಕೆಶಿ ಆರೋಪ; ವಿವಾದ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯರ ನೇತೃತ್ವದಲ್ಲಿರುವ ಕಾಂಗ್ರೆಸ್ ಸರಕಾರವನ್ನು ಬುಡ ಮೇಲುಗೊಳಿಸುವ ಉದ್ದೇಶದಿಂದ ಕಣ್ಣೂರು ಜಿಲ್ಲೆಯ ಖ್ಯಾತ ಕ್ಷೇತ್ರ ವೊಂದರ ಪರಿಸರದಲ್ಲಿ ಶತ್ರುಭೈರವಿ ಯಾಗ ಹಾಗೂ ಮೃಗಬಲಿ ನಡೆಸಿರುವುದಾಗಿ ಆರೋಪಿಸಲಾಗಿದೆ. ಕರ್ನಾಟಕ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಈ ಆರೋಪ  ಹೊರಿಸಿ ದ್ದಾರೆ. ಬೆಂಗಳೂರಿನಲ್ಲಿ ಸುದ್ಧಿಗಾರರೊಂ ದಿಗೆ ಮಾತನಾಡಿದ ಅವರು ಈ ವಿಷಯದಲ್ಲಿ ಅವರಿಗೆ ಲಭಿಸಿದ ಪತ್ರವೊಂದನ್ನು ಎತ್ತಿ ತೋರಿಸಿ ಮಾಹಿತಿ ನೀಡಿದ್ದಾರೆ. ಯಾಗದಲ್ಲಿ ಭಾಗ ವಹಿಸಿದವರೇ ತನ್ನಲ್ಲಿ ಈ ವಿಷಯವನ್ನು ತಿಳಿಸಿರುವುದಾಗಿಯೂ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

ಕಣ್ಣೂರು ಜಿಲ್ಲೆಯ ಒಂದು ಪ್ರಸಿದ್ಧ ಕ್ಷೇತ್ರದ ಹೆಸರು ಹೇಳಿ ಶಿವ ಕುಮಾರ್ ಈ ಆರೋಪ ಹೊರಿ ಸಿದ್ದು, ಆದರೆ ಕ್ಷೇತ್ರದೊಳಗಲ್ಲ ಆ ಪರಿಸರದ ನಿರ್ಜನ ಪ್ರದೇಶದಲ್ಲಿ ರಹಸ್ಯ ಕೇಂದ್ರದಲ್ಲಿ ಈ ಯಾಗ ನಡೆಸಿರುವುದಾಗಿಯೂ ತಿಳಿಸಿದ್ದಾರೆ. ಪಂಚ ಬಲಿ ರೀತಿಯಲ್ಲಿ ಐದು ಜಾತಿಯ ಮೃಗಗಳನ್ನು ಬಲಿ ನೀಡಿರುವುದಾಗಿಯೂ ಅವರು ಆರೋಪಿಸಿದ್ದಾರೆ. ಇದರಲ್ಲಿ 21 ಮೇಕೆ, 3 ಎಮ್ಮೆ, 21 ಕುರಿ, 5 ಹಂದಿಗಳನ್ನು ಪಯೋಗಿಸಿರುವು ದಾಗಿಯೂ ಅವರು ತಿಳಿಸಿದ್ದಾರೆ. ಈ ವಿಷಯ ಈಗ ಕರ್ನಾಟಕದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page