ಕಲ್ಲಿಕೋಟೆಯಲ್ಲಿ ಅಪೂರ್ವ ಮಲೇರಿಯಾ ಪತ್ತೆ

ಕಲ್ಲಿಕೋಟೆ: ಕಲ್ಲಿ ಕೋಟೆಯಲ್ಲಿ ಅಪೂರ್ವ ರೀತಿಯ ಮಲೇರಿಯಾ ಜ್ವರ ಪತ್ತೆಯಾಗಿದೆ. ಕಲ್ಲಿಕೋಟೆ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಯುವಕನಿಗೆ ಪ್ಲಾಸ್ಮೋಡಿಯಂ ವೈರಲ್ ಮಲೇರಿಯಾ ದೃಢೀಕರಿಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ರೋಗ ಪತ್ತೆಯಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ.  ಕುನ್ನುಮಂಗಲಂ ನಿವಾಸಿಯಾದ ಯುವಕ ಕೆಲಸ ಅಗತ್ಯಕ್ಕಾಗಿ ಈ ಹಿಂದೆ ಮುಂಬಯಿಗೆ ತೆರಳಿದ್ದರು. ಅಲ್ಲಿಂದ ಈ ರೋಗ ಇವರಿಗೆ ಹರಡಿದೆಯೇ ಎಂಬ ಶಂಕೆ ಉಂಟಾಗಿದೆ ಎನ್ನಲಾಗುತ್ತಿದೆ

Leave a Reply

Your email address will not be published. Required fields are marked *

You cannot copy content of this page