ಕಲ್ಲಿಕೋಟೆ ಸಹಿತ ಹಲವೆಡೆ ಎನ್‌ಐಎ ದಾಳಿ: ಹೋಟೆಲ್ ಕಾರ್ಮಿಕ ವಶ

ಕಲ್ಲಿಕೋಟೆ: ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿರುವುದಾಗಿ ಸ್ಪಷ್ಟ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಲಕ್ನೋದಿಂದ ಆಗಮಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಲ್ಲಿಕೋಟೆ ಸೇರಿದಂತೆ ಹಲವೆಡೆಗಳಲ್ಲಿ ದಾಳಿ ನಡೆಸಿದೆ.

ಇದರಂತೆ ಕಲ್ಲಿಕೋಟೆಯಲ್ಲಿ ನಡೆಸಲಾದ ದಾಳಿಯಲ್ಲಿ ಕಲ್ಲಿಕೋಟೆ ನಗರದ ಹೋಟೆಲೊಂದರ ಕಾರ್ಮಿಕನಾದ ಯುಪಿ ಲಕ್ನೋ ನಿವಾಸಿಯಾಗಿರುವ ೧೭ರ ಹರೆಯದ ಯುವಕನನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡು ಆತನನ್ನು ಸುಮಾರು ೪೦ ನಿಮಿಷಗಳ ತನಕ  ವಿಚಾರಣೆ ನಡೆಸಿದೆ. ಮಾತ್ರವಲ್ಲ ಲಕ್ನೋದಲ್ಲಿರುವ ಎನ್‌ಐಎ ಕಚೇರಿಯಲ್ಲಿ ಡಿಸೆಂಬರ್ ೨೭ರಂದು  ಇಂದು ಹಾಜರಾಗುವಂತೆ ನಿರ್ದೇಶಿಸಿ ಎನ್‌ಐಎ ಆತನಿಗೆ ಬಳಿಕ ನೋಟೀಸು ಜ್ಯಾರಿಗೊಳಿಸಿದೆ.ಎನ್‌ಐಎ ವಿಚಾರಣೆಗೊ               ಳಪಡಿಸಿದ ಯುವಕ ೨೦ ದಿನಗಳ ಹಿಂದೆಯಷ್ಟೇ ಕೆಲಸ ಅರಸಿಕೊಂಡು ಕೇರಳಕ್ಕೆ ಆಗಮಿಸಿದ್ದನು. ಬಳಿಕ ಕಲ್ಲಿಕೋಟೆಯ ಹೋಟೆಲೊಂದರಲ್ಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರ್ಪಡೆಗೊಂ ಡಿದ್ದನು.  ಈತ ಮೊಬೈಲ್ ಫೋನ್ ಮೂಲಕ ಹಲವು ಬಾರಿ ಪಾಕಿಸ್ತಾನ ಮೂಲದ ಕೆಲವು ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ನಡೆಸಿ ಆಶಯ ವಿನಿಮಯ ನಡೆಸಿದ್ದನು.  ಮಾತ್ರವಲ್ಲ ಪಾಕ್ ಉಗ್ರವಾದಿ ಸಂಘಟನೆಗಳ ಆಶಯಗಳನ್ನು ಪ್ರಚಾರ ಮಾಡುವಉತ್ತರ ಭಾರತದ ಗಸ್-ಎ-ಇ  ಹಿಂದ್ ಎಂಬ ಸಂಘಟನೆಯ ಸದಸ್ಯನೂ ಆಗಿದ್ದಾನೆ. ಆ ಸಂಘಟನೆ ಮೂಲಕ ಆತ ಉಗ್ರಗಾಮಿಗ ಳೊಂದಿಗೆ ನಿರಂತರವಾಗಿ ಆಶಯ ವಿನಿಮಯ ನಡೆಸುತ್ತಿದ್ದನೆಂದೂ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರಗಾಮಿ ಗಳ ಆತ್ಮಾಹುತಿ ಬಾಂಬರ್‌ಗಳಾಗಿ ನೇಮಕಾತಿ ನಡೆಸುವುದು ಗ್ಸ್-ಎ-ಇ ಹಿಂದ್ ಸಂಘಟನೆಯ ಪ್ರಧಾನ ಗುರಿಯಾಗಿದೆ. ಹೀಗೆ   ನೇಮಕಗೊಳಿಸು ವವರನ್ನು ಪಾಕ್  ಭಯೋತ್ಪಾದಕ  ಸಂಘಟನೆಗಳು  ನಂತರ ಆತ್ಮಾಹುತಿ ಬಾಂಬರ್ ಗಳನ್ನಾಗಿ  ಉಪಯೋಗಿಸಿ ಬಾಂಬ್ ಸ್ಫೋಟ ನಡೆಸುತ್ತಿದೆ. ಎನ್‌ಐಎ ವಶಕ್ಕೆ ತೆಗೆದುಕೊಂಡಿರುವ ಲಕ್ನೋದ ಈ ಯುವಕನ ಕುರಿತಾದ ಹೆಚ್ಚಿನ ಮಾಹಿತಿ ಹಾಗೂ ಆತ ಹೊಂದಿ ರುವ  ಇತರ ನಂಟಿನ ಬಗ್ಗೆಯೂ  ಎನ್‌ಐಎ ಸಮಗ್ರ ತನಿಖೆ ನಡೆಸತೊಡ ಗಿದೆ. ಕಲ್ಲಿಕೋಟೆಯ ಹೊರತಾಗಿ ಮಧ್ಯಪ್ರದೇಶದ  ದುವಾಸ್, ಗುಜರಾತ್‌ನ ಗಿರ್ ಸೋಮನಾಥ್, ಉತ್ತರಪ್ರದೇಶದ ಅಝಂಗಡ್ ಮೊದಲಾದೆಡೆಗಳಲ್ಲೂ ಎನ್‌ಐಎ ಏಕಕಾಲದಲ್ಲಿ ದಾಳಿ ನಡೆಸಿದೆ.

Leave a Reply

Your email address will not be published. Required fields are marked *

You cannot copy content of this page