ಕಳರಿ ತರಬೇತಿ ವೇಳೆ ಯುವತಿಗೆ ಕಿರುಕುಳ ಯತ್ನ ತರಬೇತುದಾರ ಬಂಧನ
ಕಣ್ಣೂರು: ಕಳರಿ ತರಬೇತಿ ಗಾಗಿ ತಲುಪಿದ ವಿದೇಶಿ ಯುವ ತಿಗೆ ತರಬೇತುದಾರ ಕಿರುಕುಳ ನೀಡಲೆತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ತರಬೇತುದಾರ ಕಣ್ಣೂರು ನಗರ ಠಾಣೆ ವ್ಯಾಪ್ತಿಯ ತೊಟ್ಟಡ ಕಾಂಞಿರ ನಿವಾಸಿ ಸುಜಿತ್ ಗುರುಕ್ಕಳ (54) ಎಂಬಾ ತನನ್ನು ಪೊಲೀಸರು ಬಂಧಿಸಿ ದ್ದಾರೆ. ಕಳೆದ ವರ್ಷ ನವೆಂಬರ್‌ನಿಂದ ಈ ವರ್ಷ ಮಾರ್ಚ್‌ವರೆಗೆ ಹಲವು ಬಾರಿ ಕಿರುಕುಳ ನೀಡಲೆತ್ನಿಸಿರು ವುದಾಗಿ ಆರೋಪಿಸಿ 42ರ ಹರೆಯದ ಯುವತಿ ಪೊಲೀಸರಿಗೆ ದೂರು ನೀಡಿದ್ದಳು.
ಕೊಲ್ಕತ್ತದಲ್ಲಿ ವಾಸಿಸುವ ಭಾರತೀಯ ಪೌರತ್ವವುಳ್ಳ ವಿದೇಶಿ ಮಹಿಳೆಗೆ ಸುಜಿತ್ ಕಿರುಕುಳ ನೀಡಲೆತ್ನಿಸಿದ್ದಾನೆನ್ನಲಾಗಿದೆ. ಈ ಬಗ್ಗೆ ಮೊನ್ನೆ ಯುವತಿ ಪೊಲೀಸರಿಗೆ ದೂರು ನೀಡಿದ್ದಳು.