ತಿರುವನಂತಪುರ: ಸಾರಿಗೆ ಕಾನೂನು ಉಲ್ಲಂಘಿಸುವವರ ಪತ್ತೆಗಾಗಿ ರಾಜ್ಯದಾದ್ಯಂತ ಸ್ಥಾಪಿಸಲಾದ ಎಐ ಕ್ಯಾಮರಾದಲ್ಲಿ ಈಗಾಗಲೇ ಹಲವು ಮಂದಿ ಸೆರೆಯಾಗಿದ್ದು, ಅವರಿಂದ ದಂಡ ವಸೂಲು ಮಾಡಲಾಗಿದೆ. ಇದೇ ವೇಳೆ ಕಳೆದ ತಿಂಗಳು ಎಐ ಕ್ಯಾಮರಾದಲ್ಲಿ ೧೩ ಮಂದಿ ಶಾಸಕರು ಹಾಗೂ ಸಂಸದರ ವಾಹನಗಳು ಕೂಡಾ ಸಾರಿಗೆ ಉಲ್ಲಂಘಿಸಿರುವುದನ್ನು ಪತ್ತೆಹಚ್ಚಲಾಗಿದೆ.