ಕಾಂಗ್ರೆಸ್‌ಗೆ ಬಿಜೆಪಿಯ ಭಯ ಆವರಿಸಿದೆ- ಬಿನೊ ವಿಶ್ವಂ

ಕಾಸರಗೋಡು: ಈ ಲೋಕಸಭಾಚು ನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯ ಭಯ ಆವರಿಸಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೊ ವಿಶ್ವಂ ಹೇಳಿದ್ದಾರೆ. ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಜನಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮಹಾತ್ಮಗಾಂಧಿಯನ್ನು ಮರೆತು ನೆಹರೂರನ್ನು ಬಲಿಪಶು ಮಾಡುತ್ತಿರುವ ಪಕ್ಷವಾಗಿದೆ ಇಂದಿನ ಕಾಂಗ್ರೆಸ್. ಬಿಜೆಪಿ ನೇತಾರ ಅನಿಲ್ ಆಂಟನಿಯವರ ನಿಲುವು ರಾಜಕೀಯ ಗತಿಗೇಡಿತನದ ಒಂದು ತಮಾಷೆಯಾಗಿದೆ. ಆ ತಮಾಷೆ ನೋಡಿ ಅನಿಲ್‌ರ ತಂದೆ ಎ.ಕೆ. ಆಂಟನಿಯವರು ದುಃಖಿತರಾಗಿದ್ದಾರೆ ಎಂಬುವುದು ಅವರು ಕರೆದ ಪತ್ರಿಕಾಗೋಷ್ಠಿಯಲ್ಲೇ ಎಲ್ಲರಿಗೂ ಮನದಟ್ಟಾಗಿದೆ. ಇಂದಿನ ಕಾಂಗ್ರೆಸ್‌ನ ಹಲವರು ನಾಳೆ ಬಿಜೆಪಿಗೆ ಸೇರಲು ಕಾದು ನಿಂತಿದ್ದಾರೆ. ಬಿಜೆಪಿಯ ಭಯದಿಂದ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ತನ್ನ ಸ್ವಂತ ಪತಾಕೆಯನ್ನೂ ಪ್ರದರ್ಶಿಸಲು ತಯಾರಾಗುತ್ತಿಲ್ಲ. ಆದರೆ ಜತೆಗೆ ಇಂತಹ ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್‌ನ ಪತಾಕೆಯನ್ನು ಪ್ರದರ್ಶಿಸಬಾರದೆಂಬ ನಿರ್ದೇಶವನ್ನೂ ಕಾಂಗ್ರೆಸ್ ನೀಡುತ್ತಿದೆ. ಅದೇ ಕಾಂಗ್ರೆಸ್ ಪೈವಳಿಕೆಯಲ್ಲೂ ಬಿಜೆಪಿಗಾಗಿ ಕೈಯೆತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಇದು ಪುನರಾವರ್ತನೆಗೊಳ್ಳಲಿದೆ ಎಂದು ಬಿನೊ ವಿಶ್ವಂ ಹೇಳಿದ್ದಾರೆ. ‘ದಿ- ಕೇರಳ ಸ್ಟೋರಿ’ ಸಿನೆಮಾ ಕಪಟತನ ಮತ್ತು ಸುಳ್ಳಿನ ಒಂದು ಕಥೆಯಾಗಿದೆ. ಇದು ಸತ್ಯಕತೆಯಲ್ಲ. ಸಹೋದರತೆಯನ್ನು ಮೈಗೂಡಿಸಿಕೊಂಡಿರುವ ರಾಜ್ಯವಾಗಿದೆ ಕೇರಳ. ಕೆಲವು ಕ್ರೈಸ್ತ ಧರ್ಮಗುರುಗಳು ಈ ಸಿನೆಮಾವನ್ನು ಪ್ರದರ್ಶಿಸಲು ಯತ್ನಿಸುತ್ತಿದ್ದಾರೆ. ಇದು ಆರ್‌ಎಸ್‌ಎಸ್‌ನ ಆಶಯಗಳನ್ನು ಬೆಂಬ ಲತನ ರೀತಿಯ ಒಂದು ಕ್ರಮವಾಗಿದೆ. ಇಂದು ಮುಸ್ಲಿಂ ವಿಭಾಗವನ್ನು ಗುರಿಯನ್ನಾಗಿಸಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಳೆ ಕ್ರೈಸ್ತರನ್ನು ತನ್ನ ಗುರಿಯನ್ನಾಗಿಸಲಿದೆ ಎಂದು ಬಿನೊ ವಿಶ್ವಂ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page