ಕಾಂಗ್ರೆಸ್‌ನ ಪ್ಯಾಲೆಸ್ತೀನ್ ಐಕ್ಯದಾರ್ಢ್ಯ ರ‍್ಯಾಲಿಯಲ್ಲಿ ಭಾಗವಹಿಸಲು ಶಶಿ ತರೂರ್‌ಗೆ ಆಹ್ವಾನವಿಲ್ಲ

ಕಲ್ಲಿಕೋಟೆ: ಪ್ಯಾಲೆಸ್ತೀನ್‌ಗೆ ಐಕ್ಯದಾರ್ಢ್ಯ ವ್ಯಕ್ತಪಡಿಸುವ ನಿಟ್ಟಿನಲ್ಲಿ  ಕಾಂಗ್ರೆಸ್‌ನ ರಾಜ್ಯ ಘಟಕದ ನೇತೃತ್ವದಲ್ಲಿ ನ. ೨೩ರಂದು  ಕಲ್ಲಿಕೋಟೆ ಕಡಪ್ಪುರದಲ್ಲಿ ಆಯೋಜಿಸಲಾಗಿರುವ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅದೇ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಿರುವಂತಪುರ ಸಂಸದರೂ ಆಗಿರುವ ಶಶಿ ತರೂರ್‌ಗೆ ಈತನಕ ಆಹ್ವಾನ ನೀಡಲಾಗಿಲ್ಲ. ಈ ವಿಷಯ  ಕಾಂಗ್ರೆಸ್‌ನೊಳಗೆ ಭಾರೀ ಅನಿಶ್ಚಿತತೆಗೆ ದಾರಿಮಾಡಿಕೊಟ್ಟಿದೆ.

ರ‍್ಯಾಲಿಯಲ್ಲಿ ಭಾಗವಹಿಸುವ ಬಗ್ಗೆ ನನಗೆ ಈತನಕ ಆಹ್ವಾನ ಲಭಿಸಿಲ್ಲ. ಅದೇ ದಿನ ತನ್ನ ಸಹೋದರಿ ಪುತ್ರನ ಮದುವೆಯೂ ನಡೆಯಲಿದೆ.  ಅದರಲ್ಲೂ ನನಗೆ ಭಾಗವಹಿಸಬೇಕಾಗಿದೆ. ಆದರೆ ಆಹ್ವಾನ ಲಭಿಸಿದಲ್ಲಿ ಅಲ್ಪ ತಡವಾದರೂ ರ‍್ಯಾಲಿಯಲ್ಲಿ ನಾನು ಭಾಗವಹಿಸುವೆನೆಂದು ತರೂರ್ ಸುದ್ದಿಗಾರರಲ್ಲಿ ತಿಳಿಸಿದ್ದಾರೆ.

ಮುಸ್ಲಿಂ ಲೀಗ್ ನೇತೃತ್ವದಲ್ಲಿ ಇತ್ತೀಚೆಗೆ ಕಲ್ಲಿಕೋಟೆಯಲ್ಲಿ  ನಡೆದ ಪ್ಯಾಲೆಸ್ತೀನ್ ಐಕ್ಯದಾರ್ಢ್ಯ ಸಮಾವೇಶ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡುತ್ತಿದ್ದ ವೇಳೆ  ಶಶಿ ತರೂರ್, ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ  ಹಮಾಸ್ ನಡೆಸಿದ್ದು ಭಯೋತ್ಪಾದಕ ದಾಳಿಯಾಗಿದೆಯೆಂದು ಹೇಳಿದ್ದರು. ಅದು ಮುಸ್ಲಿಂ ಲೀಗ್‌ನ್ನು ಮಾತ್ರವಲ್ಲ ಕಾಂಗ್ರೆಸ್‌ನಲ್ಲೂ ಇರಿಸುಮುರಿಸು ಉಂಟುಮಾಡಿತ್ತು. ಮಾತ್ರವಲ್ಲ ಸಿಪಿಎಂ ನೇತೃತ್ವದಲ್ಲಿ ನಡೆದ ಪ್ಯಾಲೆಸ್ತೀನ್ ಬೆಂಬಲ ರ‍್ಯಾಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ತರೂರ್‌ನ ಈ ಹೇಳಿಕೆಯನ್ನು ಒಂದು ಆಯುಧವನ್ನಾಗಿಸಿ ಕಾಂಗ್ರೆಸ್‌ನ ವಿರುದ್ಧ ಪ್ರಯೋಗಿಸಿದ್ದರು. ಆದ್ದರಿಂದ ಶಶಿ ತರೂರ್ ಕಾಂಗ್ರೆಸ್ ರ‍್ಯಾಲಿಯಲ್ಲಿ ಭಾಗವಹಿಸಿದ್ದಲ್ಲಿ ಅದು ತಮಗೆ ಪ್ರತಿಕೂಲಕರವಾಗಬಹುದೆಂಬ ಭಾವನೆ ಕಾಂಗ್ರೆಸ್ ಪಾಳಯದ ಹಲವರಲ್ಲಿ ಉಂಟಾಗಿದೆ.  ಅದುವೇ ಕಾಂಗ್ರೆಸ್ ರ‍್ಯಾಲಿಯಲ್ಲಿ ತರೂರ್‌ಗೆ ಆಹ್ವಾನ ನೀಡದಿರುವುದರ ಕಾರಣ ವೆಂದು ಹೇಳಲಾಗುತ್ತಿದೆ.  ತರೂರ್‌ಗೆ ಆಹ್ವಾನ ನೀಡುವ ವಿಷಯ ಕಾಂಗ್ರೆಸ್‌ನೊಳಗೆ ಈಗ ಭಾರೀ ಚರ್ಚಾ ವಿಷಯವಾಗಿ ಮಾರ್ಪ ಟ್ಟಿದೆ.

ಆದರೆ  ರ‍್ಯಾಲಿಯಲ್ಲಿ ಭಾಗವಹಿ ಸಲು  ತರೂರ್ ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಬೇಕೆಂದು ಶಶಿ ತರೂರ್‌ರ ಆಪ್ತ ಸ್ನೇಹಿತ ರಾಗಿರುವ ಸಂಸದ ಎಂ.ಕೆ. ರಾಘ ವನ್ ಹೇಳಿದ್ದಾರೆ. ಆದರೆ ರ‍್ಯಾಲಿ ಯಲ್ಲಿ  ಯಾರು ಭಾಗವಹಿಸಬೇ ಕೆಂಬುವುದನ್ನು ಪಕ್ಷದ ನೇತೃತ್ವವೇ ತೀರ್ಮಾನಿಸಲಿದೆಯೆಂದು ಕಾಂಗ್ರೆಸ್‌ನ ಇತರ ರಾಜ್ಯ ನೇತಾರರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page