ಕಾಂಗ್ರೆಸ್ ನೇತಾರ ನಿಧನ
ಹೊಸದುರ್ಗ: ಕಾಂಗ್ರೆಸ್ ನೇತಾರ ರಾವಣೇಶ್ವರ ತಣ್ಣೋಟ್ನ ಕೆ.ಕುಂಞಂಬು (೮೪) ನಿಧನಹೊಂ ದಿದರು. ದೀರ್ಘಕಾಲ ಅಜಾನೂರು ಮಂಡಲ ಕಾಂಗ್ರೆಸ್ ಅಧ್ಯಕ್ಷರಾಗಿ ದ್ದರು. ಕೋಟಚ್ಚೇರಿ ಕೋ-ಆಪರೇಟಿವ್ ಮಾರ್ಕೆಟಿಂಗ್ ಸೊಸೈಟಿ ಡೈರೆಕ್ಟರ್, ಉದುಮ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ನಾರಾಯಣಿ, ಮಕ್ಕಳಾದ ರಾಜನ್, ಲೀನ, ಎ.ವಿ. ಮಧು, ಬೇಬಿ ಉಷ, ಸುನಿಲ್, ಸೊಸೆಯಂದಿರಾದ ಅನಿತ, ಸರಿತ, ವಾಣಿ, ಸಹೋದರ-ಸಹೋದರಿ ಯರಾದ ಕೋಮನ್, ಕಣ್ಣನ್, ಕೆ.ವಿ.ಕುಂಞಿರಾಮನ್, ಮಾಣಿ, ಜಾನಕಿ, ನಾರಾಯಣಿ, ಲಕ್ಷ್ಮಿ, ತಂಬಾನ್ ಮೊದಲಾದ ವರನ್ನು ಅಗಲಿದ್ದಾರೆ.