ಕಲ್ಲಿಕೋಟೆ: ತಮಿಳುನಾಡಿನ ಗುಡಲ್ಲೂರ್‌ನಲ್ಲಿ ಕಾಡಾನೆ ಯುವಕನನ್ನು ಆಕ್ರಮಿಸಿ ಕೊಂದಿದೆ. ಯೂತ್ ಕಾಂಗ್ರೆಸ್ ಮಂಡಲ ಅಧ್ಯಕ್ಷನಾಗಿರುವ ಜಂಶೀದ್ (37)ನನ್ನು ಆನೆ ಕೊಂದಿದ್ದು, ಮಲಪ್ಪುರದಿಂದ ವಲಸೆ ಹೋದ ಮಲೆಯಾಳಿ ಕುಟುಂಬವಾಗಿದೆ ಇವರದ್ದು. ನಿನ್ನೆ ರಾತ್ರಿ 12 ಗಂಟೆಗೆ ಕಾಡಾನೆಯ ಆಕ್ರಮಣ ಉಂಟಾಗಿದೆ ಎಂದು ಮಾಹಿತಿ ಇದೆ. ಬೆಂಗಳೂರಿನಲ್ಲಿ ಹೊಟೇಲ್ ನೌಕರನಾಗಿದ್ದಾರೆ ಜಂಶೀದ್.