ಕಾಡುಹಂದಿ ದಾಳಿ: ಟ್ಯಾಪಿಂಗ್ ಕಾರ್ಮಿಕ ಗಾಯ
ಕಾಸರಗೋಡು: ಕಾಡು ಹಂದಿಯ ದಾಳಿಗೆ ಟ್ಯಾಪಿಂಗ್ ಕಾರ್ಮಿಕ ಗಾಯಗೊಂಡ ಘಟನೆ ಬೇತೂರುಪಾರದಲ್ಲಿ ನಡೆದಿದೆ. ಕಣ್ಣೂರು ನಿವಾಸಿ ಡೆನ್ನಿಸ್ ಕೆ ಜೇಮ್ಸ್ ಕಾಡುಹಂದಿಯ ತಿವಿತಕ್ಕೊ ಳಗಾದ ಕಾರ್ಮಿಕ. ಇವರು ನಿನ್ನೆ ಬೆಳಿಗ್ಗೆ ಬೇತೂರುಪಾರ ಚೊಟ್ಟೆತ್ತೋಲ್‌ನಲ್ಲಿನ ಖಾಸಗಿ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಕಾಡುಹಂದಿಯೊಂದು ಅವರಿಗೆ ತಿವಿದು ಓಡಿ ಹೋಗಿದೆ. ಕಾಲಿಗೆ ಗಾಯಗೊಂಡ ಡೆನ್ನಿಸ್‌ರನ್ನು ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.