ಕಾಡು ಸವರುವ ಯಂತ್ರ, ಮೋಟಾರ್ ಕಳವು ಗೈದ ವ್ಯಕ್ತಿ ಸೆರೆ
ಕುಂಬಳೆ: ಹಳೆಯ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಯಿಂದ ಕಾಡು ಸವರುವ ಯಂತ್ರ ಹಾಗೂ ಇತರ ಸಾಮಗ್ರಿಗಳನ್ನು ಕಳವುಗೈದ ಪ್ರಕರಣದಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಕುಂಬಳೆ ಪೊಟ್ಟೋರಿ ನಿವಾಸಿ ಜನಾರ್ದನ (40)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪೊಸಂತಡ್ಕದ ಮೋಹನ್ದಾಸ್ರ ಮಾಲಕತ್ವದಲ್ಲಿರುವ ಅಂಗಡಿಯಿಂದ ಈ ತಿಂಗಳ 17-19ರ ಮಧ್ಯೆಗಿನ ದಿನಗಳಲ್ಲಿ ಕಳವು ನಡೆಸಲಾಗಿದೆ. ಕಾಡು ಸವರುವ ಯಂತ್ರ, ಗ್ರೈಂಡರ್ನ ಮೋಟರ್, ಕಬ್ಬಿಣದ ಸಾಮಗ್ರಿಗಳನ್ನು ಇಲ್ಲಿಂದ ಕಳವುಗೈಯ್ಯಲಾಗಿದೆ. ಈ ಅಂಗಡಿಗೆ ಕೆಲವೊಮ್ಮೆ ಕೆಲಸಕ್ಕೆ ತಲುಪುವ ವ್ಯಕ್ತಿಯಾಗಿದ್ದಾನೆ ಜನಾರ್ದನ ಎಂದು ಅಂಗಡಿ ಮಾಲಕ ದೂರಿನಲ್ಲಿ ತಿಳಿಸಿದ್ದಾರೆ.