ಕಾನತ್ತೂರಿನಲ್ಲಿ ಚಿರತೆ ಪ್ರತ್ಯಕ್ಷ

ಮುಳಿಯಾರು: ಮುಳಿಯಾರು ಕಾನತ್ತೂರಿನಲ್ಲಿ ನಿನ್ನೆ ರಾತ್ರಿ ಚಿರತೆ ಪತ್ತೆಯಾಗಿದೆ. ಸಿನಿಮಾ ನೋಡಿ ಕಾರಿನಲ್ಲಿ ಊರಿಗೆ ಹಿಂತಿರುಗುತ್ತಿ ರುವವರು  ನಿನ್ನೆ ರಾತ್ರಿ 9 ಗಂಟೆ ವೇಳೆ ಕರಿವೇಡಗಂ- ಬಾವಿಕೆರೆ ದಾರಿ ಮಧ್ಯೆ ಚಿರತೆ ರಸ್ತೆ ಬದಿ ಸಾಗುತ್ತಿರುವುದನ್ನು ಕಂಡಿದ್ದಾರೆನ್ನಲಾಗಿದೆ. ಚಿರತೆ ಬಳಿಕ ಅಲ್ಲೇ ಪಕ್ಕದ ಕಾಡಿಗೆ ಹೋಯಿತೆ ನ್ನಲಾಗಿದೆ. ಇದರಿಂದಾಗಿ ಕಾನತ್ತೂರು ಮತ್ತು ಪರಿಸರ ಪ್ರದೇಶಗಳ ಜನರಲ್ಲಿ ಚಿರತೆ ಕಾಟದ ಬೆದರಿಕೆ ಉಂಟಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಇನ್ನೊಂದೆಡೆ ಚಿರತೆಯ ಪತ್ತೆಗಾಗಿ ಪರಿಸರದ ಅರಣ್ಯದಾದ್ಯಂತ ಶೋಧ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page